ADVERTISEMENT

ಅತ್ಯಾಚಾರ ಪ್ರಕರಣ: ಆರೋಪಿ ಪಾಕ್‌ ಕ್ರಿಕೆಟಿಗ  ಹೈದರ್‌ ಅಲಿ ಅಮಾನತು

ಏಜೆನ್ಸೀಸ್
Published 8 ಆಗಸ್ಟ್ 2025, 19:53 IST
Last Updated 8 ಆಗಸ್ಟ್ 2025, 19:53 IST
<div class="paragraphs"><p>ಅಮಾನತು</p></div>

ಅಮಾನತು

   

ಮ್ಯಾಂಚೆಸ್ಟರ್‌: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಪಾಕಿಸ್ತಾನ ತಂಡದ ಬ್ಯಾಟರ್‌ ಹೈದರ್‌ ಅಲಿ ಇಂಗ್ಲೆಂಡ್‌ನಲ್ಲಿ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತಿಳಿಸಿದೆ. 

ವಿಚಾರಣೆಯ ವರದಿ ಹೊರಬರುವವರೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಿಸಿಬಿಯು ಅಮಾನತು ಆಡಿದೆ. ಅಲಿ ಅವರಿಗೆ ಅಗತ್ಯವಿರುವ ಕಾನೂನು ಬೆಂಬಲ ಒದಗಿಸಲಾಗಿದೆ ಎಂದೂ ಪಿಸಿಬಿ ತಿಳಿಸಿದೆ. 

ADVERTISEMENT

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಗ್ರೇಟರ್‌ ಮ್ಯಾಂಚೆಸ್ಟರ್ ಪೊಲೀಸರು ಖಚಿತಪಡಿಸಿದ್ದಾರೆ.

ಪಾಕಿಸ್ತಾನ್‌ ಶಹೀನ್ಸ್‌ ತಂಡದ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೇಳೆ ‘ಹೈದರ್‌ ಅಲಿ ಒಳಗೊಂಡ ಪ್ರಕರಣಕ್ಕೆ’ ಸಂಬಂಧಪಟ್ಟಂತೆ ಈ ವಿಚಾರಣೆ ನಡೆಯುತ್ತಿದೆ ಎಂದು ಪಿಸಿಬಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.