ADVERTISEMENT

ಇದೊಂದು ಕನಸಿನ ವಿಚಾರ: ಎಜಾಜ್ ಪಟೇಲ್ ಸಾಧನೆಯನ್ನು ಹೊಗಳಿದ ರವಿಚಂದ್ರನ್ ಅಶ್ವಿನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2021, 5:48 IST
Last Updated 5 ಡಿಸೆಂಬರ್ 2021, 5:48 IST
ರವಿಚಂದ್ರನ್‌ ಅಶ್ವಿನ್
ರವಿಚಂದ್ರನ್‌ ಅಶ್ವಿನ್   

ಮುಂಬೈ: ಟೆಸ್ಟ್‌ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದನ್ಯೂಜಿಲೆಂಡ್‌ನ ಸ್ಪಿನ್ನರ್ ಎಜಾಜ್ ಪಟೇಲ್ ಅವರಿಗೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಕ್ರಿಕೆಟ್‌ ಲೋಕದಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದಕ್ಕಾಗಿ ಎಜಾಜ್‌ ಪಟೇಲ್‌ ಅವರಿಗೆ ಭಾರತದ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

‘ಒಂದು ಇನ್ನಿಂಗ್ಸ್‌ನಲ್ಲಿ ಎಜಾಜ್ ಪಟೇಲ್ 10 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ 99 ಪ್ರತಿಶತದಷ್ಟು ಬೌಲರ್‌ಗಳು ಸೇರದ ಕ್ಲಬ್‌ಗೆ ಎಜಾಜ್‌ ಪಟೇಲ್‌ ಸೇರಿರುವುದು ಉತ್ತಮ ಸಾಧನೆಯಾಗಿದೆ. ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆಯುವುದು ಕನಸಿನ ವಿಚಾರ‘ ಎಂದು ಅಶ್ವಿನ್ ತಮ್ಮ ಅಧಿಕೃತ ಕೂ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಆಗಿ ಮುಂಬೈ ಮೂಲದವರೂ ಆಗಿರುವ ಎಜಾಜ್ ಪಟೇಲ್ ಹೊರಹೊಮ್ಮಿದ್ದಾರೆ.

ಈಗಾಗಲೇ ಇಂಗ್ಲೆಂಡ್‌ನ ಜಿಮ್ ಲೇಕರ್ (1956) ಹಾಗೂ ಅನಿಲ್ ಕುಂಬ್ಳೆ (1999) ಒಂದೇ ಇನ್ನಿಂಗ್ಸ್‌ನಲ್ಲಿ10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.