‘ಪುಷ್ಟ’ ಚಿತ್ರದ ದೃಶ್ಯಗಳು ವೈರಲ್ ಆಗಿರುವುದು ನಮಗೆಲ್ಲ ತಿಳಿದೇ ಇದೆ. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು, ಸೆಲೆಬ್ರಿಟಿ ಹಾಗೂ ಕ್ರಿಕೆಟ್ ಆಟಗಾರರು ಪುಷ್ಟದ ಪ್ರಭಾವಕ್ಕೆ ಒಳಗಾಗಿದ್ದಾರೆ. ಈಗ ಈ ಲಿಸ್ಟ್‌ಗೆ ಕ್ರಿಕೆಟಿಗ ರವೀಂದ್ರ ಜಡೇಜ ಅವರೂ ಸೇರಿಕೊಂಡಿದ್ದಾರೆ.
ಗುರುವಾರ ನಡೆದ ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಜಯಸಾಧಿಸಿತು. ಈ ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಪುಷ್ಪ ಚಿತ್ರದ ವೈರಲ್ ದೃಶ್ಯವನ್ನು ಅನುಕರಿಸುವ ಮೂಲಕ ರವೀಂದ್ರ ಜಡೇಜ ಸಂಭ್ರಮಾಚರಣೆ ಮಾಡಿದರು.
ಬೌಲಿಂಗ್ ವೇಳೆ ರವೀಂದ್ರ ಜಡೇಜ ಅವರು ದಿನೇಶ್ ಚಾಂಡಿಮಾಲ್ ಅವರ ವಿಕೆಟ್ ಗಳಿಸಿದರು. ಆ ನಂತರ, ಜಡೇಜ ಅವರು ಪುಷ್ಪದ ‘ತಗ್ಗೆದೆ ಲೆ’ ದೃಶ್ಯವನ್ನು ಅನುಕರಣೆ ಮಾಡುವ ಮೂಲಕ ಸಂಭ್ರಮಿಸಿದರು.
ಆಂಧ್ರಪ್ರದೇಶದ ರಕ್ತಚಂದನ ಚೋರರ ಕಥೆ ಹೊಂದಿರುವ ಪುಷ್ಪದಲ್ಲಿ ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.