ಕೊಲಂಬೊ: ಪ್ರತೀಕಾ ರಾವಲ್ ಅರ್ಧಶತಕ ಮತ್ತು ಸ್ನೇಹ ರಾಣಾ ಅವರ ಉತ್ತಮ ಬೌಲಿಂಗ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಭಾನುವಾರ ಆರಂಭವಾದ ಏಕದಿನ ಕ್ರಿಕೆಟ್ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಜಯಿಸಿತು.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 9 ವಿಕೆಟ್‌ಗಳಿಂದ ಆತಿಥೇಯ ಶ್ರೀಲಂಕಾ ಎದುರು ಗೆದ್ದಿತು. ಮಳೆ ಸುರಿದ ಕಾರಣ ಪಂದ್ಯದಲ್ಲಿ ಬಹಳಷ್ಟು ಸಮಯ ನಷ್ಟವಾಯಿತು. ಆದ್ದರಿಂದ ಪಂದ್ಯದಲ್ಲಿ ಪ್ರತಿ ಇನಿಂಗ್ಸ್‌ಗೆ 39 ಓವರ್ ನಿಗದಿಪಡಿಸಲಾಯಿತು.
ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ನೇಹ ರಾಣಾ (31ಕ್ಕೆ3) ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಶ್ರೀಲಂಕಾ 38.1 ಓವರ್‌ಗಳಲ್ಲಿ 147 ರನ್ ಗಳಿಸಿ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಗುರಿ ಬೆನ್ನಟ್ಟಿದ ಭಾರತ ತಂಡವು 29.4 ಓವರ್‌ಗಳಲ್ಲಿ 1 ವಿಕೆಟ್‌ಗೆ 149 ರನ್ ಗಳಿಸಿ ಜಯಿಸಿತು. ಪ್ರತೀಕಾ ರಾವಲ್ (ಔಟಾಗದೇ 50, 62ಎ, 4X7) ಮತ್ತು ಸ್ಮೃತಿ ಮಂದಾನ (43; 46ಎ, 4X6) ಮೊದಲ ವಿಕೆಟ್ ಜೊತೆಯಾಟದಲ್ಲಿ 54 ರನ್ ಸೇರಿಸಿದರು.
ಹತ್ತನೇ ಓವರ್‌ನಲ್ಲಿ ಸ್ಮೃತಿ ಅವರ ವಿಕೆಟ್ ಪಡೆಯುವಲ್ಲಿ ಇನೊಕಾ ರಣವೀರ ಯಶಸ್ವಿಯಾದರು. ಪ್ರತೀಕಾ ಜೊತೆಗೂಡಿದ ಹರ್ಲೀನ್ ಡಿಯೊಲ್ (ಔಟಾಗದೇ 48; 71ಎ, 4X4) ತಂಡವನ್ನು ಗೆಲುವಿನ ದಡ ಸೇರಿಸಿದರು.
ಭಾರತ ತಂಡವು ಇದೇ 29ರಂದು ದಕ್ಷಿಣ ಆಫ್ರಿಕಾ ಎದುರು ಆಡಲಿದೆ.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 38.1 ಓವರ್‌ಗಳಲ್ಲಿ 147
(ಹಾಸಿನಿ ಪೆರೆರಾ 30, ಕವಿಶಾ ದಿಲಾರಿ 25, ಅನುಷ್ಕಾ ಸಂಜೀವನಿ 22, ದೀಪ್ತಿ ಶರ್ಮಾ 22ಕ್ಕೆ2, ಸ್ನೇಹಾ ರಾಣಾ 31ಕ್ಕೆ3, ಎನ್. ಚರಣಿ 26ಕ್ಕೆ2)
ಭಾರತ: 29.4 ಓವರ್‌ಗಳಲ್ಲಿ 1 ವಿಕೆಟ್‌ಗೆ 149 (ಪ್ರತಿಕಾ ರಾವಲ್ ಔಟಾಗದೇ 50, ಸ್ಮೃತಿ ಮಂದಾನ 43, ಹರ್ಲೀನ್ ಡಿಯೊಲ್ ಔಟಾಗದೇ 48, ಇನೊಕಾ ರಣವೀರಾ 32ಕ್ಕೆ1)
ಫಲಿತಾಂಶ: ಭಾರತ ತಂಡಕ್ಕೆ 9 ವಿಕೆಟ್‌ಗಳ ಜಯ (ಮಳೆಯಿಂದಾಗಿ ಇನಿಂಗ್ಸ್ ಅನ್ನು 39 ಓವರ್‌ಗಳಿಗೆ ನಿಗದಿ ಮಾಡಲಾಯಿತು)
ಪಂದ್ಯದ ಆಟಗಾರ್ತಿ: ಪ್ರತಿಕಾ ರಾವಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.