
ವಡೋದರ: ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯೂಪಿಎಲ್) 4ನೇ ಆವೃತ್ತಿಯಲ್ಲಿ ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವು, ಟೂರ್ನಿಯ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.
ಜ.19ರಂದು ಗುಜರಾತ್ ಜೈಂಟ್ಸ್ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಆರ್‌ಸಿಬಿ ತಂಡವು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ.
ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಸತತವಾಗಿ ಹೆಚ್ಚು ಗೆಲುವು ಸಾಧಿಸಿದ ತಂಡ ಎನ್ನುವ ದಾಖಲೆಯನ್ನು ಆರ್‌ಸಿಬಿ ತಂಡ ಮಾಡಿದೆ.
2025ರ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ, ಸೋಲನ್ನೇ ಕಾಣದ ಆರ್‌ಸಿಬಿ ತಂಡವು ಸತತ 6 ಪಂದ್ಯಗಳಲ್ಲಿ ಗೆದ್ದಿದೆ.
2023 ಹಾಗೂ 2023–24ರ ನಡುವೆ ಮುಂಬೈ ಇಂಡಿಯನ್ಸ್ ತಂಡವು ಎರಡು ಬಾರಿ ಸತತ 5 ಪಂದ್ಯಗಳಲ್ಲಿ ಜಯಿಸಿತ್ತು. 2024–25ರಲ್ಲಿ ಆರ್‌ಸಿಬಿ ಕೂಡ ಸತತ 5 ಪಂದ್ಯ ಗೆದ್ದಿತ್ತು.
ಆವೃತ್ತಿಯಲ್ಲಿ ಸತತ ಹೆಚ್ಚು ಗೆಲುವು: ಆರ್‌ಸಿಬಿ ತಂಡವು ಟೂರ್ನಿಯ 4ನೇ ಆವೃತ್ತಿಯಲ್ಲಿ ಸತತ 5 ಗೆಲುವು ದಾಖಲಿಸಿದೆ. ಡಬ್ಲ್ಯೂಪಿಎಲ್‌ನ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಸತತವಾಗಿ ಹೆಚ್ಚು ಪಂದ್ಯ ಗೆದ್ದ ತಂಡ ಎನ್ನುವ ದಾಖಲೆಯನ್ನು ಸರಿಗಟ್ಟಿದೆ. 2023ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೂಡ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.
4ನೇ ಆವೃತ್ತಿಯಲ್ಲಿ ಸತತ 5 ಪಂದ್ಯ ಗೆದ್ದಿರುವ ಆರ್‌ಸಿಬಿ, 10 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಬಾರಿ ನಾಕೌಟ್ ಹಂತವನ್ನು ಪ್ರವೇಶಿಸಿದ ಮೊದಲ ತಂಡವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.