ADVERTISEMENT

ದೆಹಲಿ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಅರುಣ್ ಜೇಟ್ಲಿ ಮಗ ರೋಹನ್ ಜೇಟ್ಲಿ ಮರುಆಯ್ಕೆ

ಪಿಟಿಐ
Published 17 ಡಿಸೆಂಬರ್ 2024, 6:36 IST
Last Updated 17 ಡಿಸೆಂಬರ್ 2024, 6:36 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ನವದೆಹಲಿ: ಕ್ರಿಕೆಟಿಗ ಮತ್ತು ಸಂಸದ ಕೀರ್ತಿ ಆಜಾಸದ್ ಅವರನ್ನು ಮಣಿಸಿ ಸತತ ಮೂರನೇ ಅವಧಿಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಮಂಡಳಿಯ(ಡಿಡಿಸಿಎ) ಅಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಮಗ ರೋಹನ್ ಜೇಟ್ಲಿ ಆಯ್ಕೆಯಾಗಿದ್ದಾರೆ.

ADVERTISEMENT

ರೋಹನ್ ಜೇಟ್ಲಿ 1,577 ಮತಗಳನ್ನು ಪಡೆದರೆ, ಆಜಾದ್ 777 ಮತ ಪಡೆದರು. ಮೂರು ವರ್ಷಗಳ ಅವಧಿಗೆ ರೋಹನ್ ಅಧ್ಯಕ್ಷರಾಗಿರುತ್ತಾರೆ. ಅವರ ತಂದೆ, ಅರುಣ್ ಜೇಟ್ಲಿ 14 ವರ್ಷಗಳ ಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು.

3,748 ಸದಸ್ಯರಿರುವ ಮಂಡಳಿಯಲ್ಲಿ 2,413 ಮತ ಚಲಾವಣೆಯಾಗಿದ್ದವು. ಗೆಲುವಿಗೆ 1,207 ಮತಗಳ ಅಗತ್ಯವಿತ್ತು.

2020ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರಜತ್ ಶರ್ಮಾ ಅಲ್ಪಾವಧಿಯಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದರು. ವರ್ಷದ ಬಳಿಕ ವಕೀಲ ವಿಕಾಸ್ ಸಿಂಗ್ ಅವರನ್ನು ಮಣಿಸಿ ಮೂರು ವರ್ಷಗಳ ಪೂರ್ಣಾವಧಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ದೆಹಲಿ ಕ್ರಿಕೆಟ್ ಮಂಡಳಿಯಲ್ಲಿ 1,000 ಅಧಿಕ ಮತಗಳನ್ನು ನಿಯಂತ್ರಿಸುವ ಬಿಸಿಸಿಐನ ಮಾಜಿ ಕಾರ್ಯಾಧ್ಯಕ್ಷ ಸಿ.ಕೆ. ಖನ್ನಾ ರೋಹನ್ ಅವರನ್ನು ಬೆಂಬಲಿಸಿದ್ದರು.

ಖನ್ನಾ ಪುತ್ರಿ ಶಿಖಾ ಕುಮಾರ್ (1,246 ಮತ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಶೋಕ್ ಶರ್ಮಾ (893) ಕಾರ್ಯದರ್ಶಿಯಾಗಿ, ಹರೀಶ್ ಶಿಂಗ್ಲಾ (1328)ಖಜಂಚಿಯಾಗಿ ಆಯ್ಕೆಯಾದರು.

ಎಲ್ಲ ಪದಾಧಿಕಾರಿಗಳನ್ನು ಮೂರು ಅವಧಿಗೆ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.