ADVERTISEMENT

ಸಚಿನ್‌ ದಾಖಲೆ ಮುರಿದ ಸೋದರಿಯರು!

​ಪ್ರಜಾವಾಣಿ ವಾರ್ತೆ
Published 4 ಮೇ 2019, 14:28 IST
Last Updated 4 ಮೇ 2019, 14:28 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ನವದೆಹಲಿ: ‘ನಿಮಗೆ ಗೊತ್ತಿಲ್ಲದಿರಬಹುದು. ಇದುವರೆಗೂನಾನು ಯಾರಿಂದಲೂ ಮುಖಕ್ಷೌರ ಮಾಡಿಕೊಂಡಿಲ್ಲ. ಈ ದಾಖಲೆ ಇಂದು ಕೊನೆಯಾಗಿದೆ.ಬಾರ್ಬರ್‌ಶಾಪ್‌ಗರ್ಲ್ಸ್‌ ಭೇಟಿಯಾದದ್ದು ಹೆಮ್ಮೆ ಎನಿಸಿದೆ ’

ಹೀಗೆಂದು ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಸಚಿನ್‌ ಹಲವು ದಾಖಲೆಗಳನ್ನು ಬರೆದಿದ್ದು, ಕೆಲವರು ಇವುಗಳನ್ನು ಮುರಿಯಬಹುದು. ಆದರೆ ತಮ್ಮ ಮೊದಲ ಕ್ಷೌರವನ್ನು ನೇಹಾ ಮತ್ತು ಜ್ಯೋತಿ ಅವರಿಂದ ಮಾಡಿಸಿಕೊಂಡಿದ್ದಾರೆ. ದಾಖಲೆ ಮುರಿದ ಶ್ರೇಯವನ್ನು ಅವರಿಗೆ ನೀಡಿದ್ದಾರೆ. ಅಲ್ಲದೆ,ಕ್ಷೌರಿಕ ವೃತ್ತಿ ಕೇವಲ ಪುರುಷರಿಗೆ ಸೀಮಿತ ಎಂಬ ‘ಮಿಥ್’ ಮುರಿದಿದ್ದಾರೆ.

ADVERTISEMENT

ಉತ್ತರಪ್ರದೇಶದ ಬನ್ವಾರಿ ಟೋಲ ಗ್ರಾಮದ ನೇಹಾ ಮತ್ತು ಜ್ಯೋತಿ ಸಹೋದರಿಯರ ತಂದೆ 2014ರಲ್ಲಿ ಅನಾರೋಗ್ಯಕ್ಕೆ ಒಳಗಾದರು. ಆಗ ತಂದೆ ನಡೆಸುತ್ತಿದ್ದ ಸಲೂನ್‌ನ ಜವಾಬ್ದಾರಿ ಹೊತ್ತರು. ಈ ಯುವತಿಯರ ಕುರಿತು ‘ಜಿಲೆಟ್‌’ 2:23 ನಿಮಿಷದ ವಿಡಿಯೊವನ್ನುತಯಾರಿಸಿತ್ತು. ಇದನ್ನು ಯೂಟ್ಯೂಬ್‌ನಲ್ಲಿ 16 ದಶಲಕ್ಷ ಜನರು ವೀಕ್ಷಿಸಿದ್ದಾರೆ. ಸಚಿನ್‌, ಸೋದರಿಯರ ಶಿಕ್ಷಣ ಮತ್ತು ವೃತ್ತಿಗಾಗಿ ‘ಜಿಲೆಟ್‌ ವಿದ್ಯಾರ್ಥಿವೇತನ’ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.