ಬೆಳಗಾವಿ: ಇಲ್ಲಿನ ಗೋವಾ–ಬೆಳಗಾವಿ ಹೆದ್ದಾರಿ ಬದಿಯ ಮಚ್ಛೆ ಪಟ್ಟಣದ ಫೌಜಿ ಟೀ ಸ್ಟಾಲ್ನಲ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೋಮವಾರ ಬೆಳಿಗ್ಗೆ ಚಹಾ ಸೇವಿಸಿ, ಮಾಲೀಕನೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಾಲೀಕ ವೈಜು ನಿಟ್ಟೂರಕರ್ ಎಂದಿನಂತೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ರಾಷ್ಟ್ರೀಯ ಹೆದ್ದಾರಿ ‘4ಎ’ ಪಕ್ಕದ ಟೀಸ್ಟಾಲ್ನ ಮುಂದೆ ಎರಡು ವಾಹನಗಳು ಬಂದು ನಿಂತವು. ಅದರಿಂದ ಇಳಿದ ಬಂದ ನಾಲ್ವರು ಅಂಗರಕ್ಷಕರು ‘ಚಹಾ’ ಆರ್ಡರ್ ಮಾಡಿದ್ದಾರೆ.
‘ವಾಹನದಲ್ಲಿ ಕುಳಿತುಕೊಂಡೇ ಚಹಾ ಸೇವಿಸಿದ ತೆಂಡೂಲ್ಕರ್, ನಂತರ ಸ್ಟಾಲ್ನತ್ತ ಬಂದರು. ‘ಚಹಾ ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರಲ್ಲದೆ ಆಟೋಗ್ರಾಫ್ ನೀಡಿದರು. ಬಳಿಕ, ಗೋವಾದತ್ತ ಪ್ರಯಾಣ ಬೆಳೆಸಿದರು. ಸಚಿನ್ ಜೊತೆಗೆ ಅವರ ಕುಟುಂಬ ಸದಸ್ಯರೂ ಇದ್ದರು’ ಎಂದು ವೈಜು ಮಾಧ್ಯಮದವರಿಗೆ ತಿಳಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.