ADVERTISEMENT

47ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್: ಅಭಿಮಾನಿಗಳಿಂದ ಟ್ವೀಟ್ ಶುಭಾಶಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 8:37 IST
Last Updated 24 ಏಪ್ರಿಲ್ 2020, 8:37 IST
ಸಚಿನ್ ತೆಂಡೂಲ್ಕರ್ (ಕೃಪೆ: ಸಚಿನ್ ಫೇಸ್‌ಬುಕ್)
ಸಚಿನ್ ತೆಂಡೂಲ್ಕರ್ (ಕೃಪೆ: ಸಚಿನ್ ಫೇಸ್‌ಬುಕ್)   

ಮುಂಬೈ: ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಕ್ರವಾರ 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಆಚರಣೆ ಸರಿಯಲ್ಲ. ಮಾರ್ಚ್ 15ರಿಂದ ಮನೆ ಬಿಟ್ಟು ಎಲ್ಲಿಯೂ ಹೊರಗೆ ಹೋಗಿಲ್ಲ.ಈ ಬಾರಿ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಸಚಿನ್ ಹೇಳಿದ್ದರು.

ಸದ್ಯ, ಕೊರೊನಾವೈರಸ್ ನಿಯಂತ್ರಣಕ್ಕಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಸಚಿನ್ ಬ್ಯುಸಿಯಾಗಿದ್ದಾರೆ, ಕೊರೊನಾವೈರಸ್ ರೋಗಿಗಳಿಗೆ ₹50 ಲಕ್ಷ ದೇಣಿಗೆ ನೀಡಿರುವ ಇವರು ಮುಂಬೈಯಲ್ಲಿರುವ 5000 ಮಂದಿಗೆ ಪ್ರತಿ ತಿಂಗಳು ದಿನಸಿ ಒದಗಿಸುತ್ತಿದ್ದಾರೆ.

ಸಚಿನ್ ಹುಟ್ಟುಹಬ್ಬ ಆಚರಿಸದೇ ಇದ್ದರೂ ಬೆಳಗ್ಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಹುಟ್ಟುಹಬ್ಬದ ಶುಭಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ. ಟ್ವಿಟರ್‌ನಲ್ಲಿ#HappyBirthdaySachin#SachinTendulkar#GodOfCricket#Sachinbirthday ಮೊದಲಾದ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

ADVERTISEMENT

ಕ್ರಿಕೆಟ್ ಆಟವಾಡಲು ಹಲವರಿಗೆ ಪ್ರೇರಣೆ ನೀಡಿದ ವ್ಯಕ್ತಿಯ ಹುಟ್ಟುಹಬ್ಬವಿಂದು. ಈ ವರ್ಷ ಶುಭದಾಯಕವಾಗಿರಲಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವಿಶ್ವಕಪ್ ಪಂದ್ಯದ ಹಳೆಯ ಎರಡು ಚಿತ್ರಗಳನ್ನು ಟ್ವೀಟಿಸಿ ಸಚಿನ್‌ಗೆ ಶುಭಕೋರಿದ್ದಾರೆ.


2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಸಚಿನ್ ಹಲವಾರು ದಾಖಲೆಗಳನ್ನು ಸೃಷ್ಟಿಸಿದ ಕ್ರಿಕೆಟಿಗರಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ದಾಖಲಿಸಿದ ಏಕೈಕ ದಾಂಡಿಗ ಇವರು.24 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದ ಸಚಿನ್, 6 ಬಾರಿ ವಿಶ್ವಕಪ್ ಪಂದ್ಯಗಳವನ್ನಾಡಿದ್ದಾರೆ ಒಂದೇ ಒಂದು ಅಂತರರಾಷ್ಟ್ರೀಯ ಟಿ20 ಆಡಿದ್ದ ಸಚಿನ್, ಐಪಿಎಲ್‌ನ 6 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.