ADVERTISEMENT

ಸಮಿತ್‌ ದ್ರಾವಿಡ್‌ ಅಜೇಯ ದ್ವಿಶತಕ

ಮಲ್ಯ ಅದಿತಿ ಶಾಲೆ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:46 IST
Last Updated 26 ಫೆಬ್ರುವರಿ 2020, 19:46 IST
ಪ್ರಶಸ್ತಿ ಗೆದ್ದ ಮಲ್ಯ ಅದಿತಿ ಶಾಲಾ ತಂಡ: ನಿಂತವರು (ಎಡದಿಂದ): ವೇದ್‌ ಚಿಕರ್‌ಮಾನೆ, ಧ್ಯಾನ್‌ ಆನಂದ್‌, ಜೋಷುವಾ ಗಣೇಶ್‌, ಅಕಾಶ್‌ ಶೆಟ್ಟಿ, ಇಶಾನ್‌ ಗೋಪಿನಾಥ್‌, ಮ್ಯಾಥ್ಯೂ ಕೊಚುತುಮೆನ್‌, ವಿಕ್ರಮಾದಿತ್ಯ ಸಿಂಗ್‌, ಧ್ರುವ್‌ ಕುಮಾರ್‌. ಕುಳಿತವರು: ಅಗಸ್ತ್ಯ ಎಸ್‌, ಜೊಯಲ್‌ ಕ್ರಿಬರಾಜ್‌ (ವಿಭಾಗದ ಮುಖ್ಯಸ್ಥ/ಕೋಚ್‌), ಸಾಹೀಶ್‌ ಜಯರಾಜನ್‌ (ಪ್ರಾಚಾರ್ಯ), ಲಕ್ಷ್ಮಿ ವಿ. ಕುಮಾರ್‌ (ಕೋಚ್‌), ಸಮಿತ್‌ ದ್ರಾವಿಡ್‌. ಮಂಡಿಯೂರಿದವರು: ಕ್ರಿಶಯ್‌ ಶೇಖರ್‌, ಅನ್ವಯ್‌ ದ್ರಾವಿಡ್‌, ಯಶಸ್‌ ಶಂಕರ್‌, ಮಾನಿರ್‌ ಶೆಟ್ಟಿ, ಅರಾನ್‌ ದಾದು.

ಬೆಂಗಳೂರು: ಸಮಿತ್‌ ದ್ರಾವಿಡ್‌ ಮತ್ತೊಮ್ಮೆ ಸ್ಫೋಟಕ ಆಟವಾಡಿದರು. ಅವರು ಗಳಿಸಿದ ಅಜೇಯ ದ್ವಿಶತಕ (211) ಬಲದಿಂದ ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ ತಂಡ ಬಿಟಿಆರ್‌ ಶೀಲ್ಡ್‌ಗಾಗಿ ನಡೆದ14 ವರ್ಷದೊಳಗಿನವರ ಎರಡನೇ ಡಿವಿಷನ್‌ ಮೊದಲ ಗುಂಪಿನ ಟೂರ್ನಿಯ ಪ್ರಶಸ್ತಿ ಗೆದ್ದಿತು.

ಬುಧವಾರ ನಡೆದ ಫೈನಲ್‌ ಪಂದ್ಯದಲ್ಲಿ ಮಲ್ಯ ಅದಿತಿ ತಂಡವು 132 ರನ್‌ಗಳಿಂದ ಬಿಜಿಎಸ್‌ ನ್ಯಾಷನಲ್‌ ಪಬ್ಲಿಕ್‌ ಶಾಲಾ ತಂಡದ ಎದುರು ಜಯಿಸಿತು. ಮೊದಲು ಬ್ಯಾಟ್‌ ಮಾಡಿದ ಮಲ್ಯ ಅದಿತಿ ತಂಡ 50 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 386 ರನ್‌ ಗಳಿಸಿತು. ಸಮಿತ್‌ 144 ಎಸೆತಗಳಲ್ಲಿ 26 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಆಕಾಶ್‌ ಶೆಟ್ಟಿ ಶತಕ (110) ದಾಖಲಿಸಿದರು. ಗುರಿ ಬೆನ್ನತ್ತಿದ ಬಿಜಿಎಸ್‌ ತಂಡ ನಿಗದಿಯ ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 254 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌: ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ: 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 386 (ಸಮಿತ್‌ ದ್ರಾವಿಡ್‌ ಔಟಾಗದೆ 211, ಆಕಾಶ್‌ 110, ಅಗಸ್ತ್ಯ ಎಸ್‌. 35). ಬಿಜಿಎಸ್‌ ಶಾಲಾ ತಂಡ: 50 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 254 (ಅರ್ಣವ್ ಮಿಶ್ರಾ ಔಟಾಗದೆ 137, ಆದಿತ್ಯ ಅಗರವಾಲ್‌ 55)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.