ADVERTISEMENT

ಶೋಯೆಬ್‌ನಿಂದ ಬೇರ್ಪಟ್ಟ ಸಾನಿಯಾಗೆ ಪಾಕ್‌ನಲ್ಲಿ ಬೆಂಬಲ

ಪಿಟಿಐ
Published 26 ಜನವರಿ 2024, 20:17 IST
Last Updated 26 ಜನವರಿ 2024, 20:17 IST
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ   

ಕರಾಚಿ: ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ನಟಿ ಸನಾ ಜಾವೆದ್ ಜತೆ ವಿವಾಹ ಆಗಿರುವುದನ್ನು ಕಳೆದ ವಾರ ಬಹಿರಂಗಪಡಿಸಿದ ಬಳಿಕ ಸಾನಿಯಾಗೆ ಪಾಕಿಸ್ತಾನ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. 

ಮಲಿಕ್ ಮತ್ತು ಸನಾ ಅವರ ನಡೆಯನ್ನು ಖಂಡಿಸಿದ್ದಾರೆ. ಶೋಯೆಬ್‌ ಅವರಿಂದ ವಿಚ್ಛೇದನ ಪಡೆಯುವ ಸಾನಿಯಾ ಮಿರ್ಜಾ ಅವರ ನಿರ್ಧಾರವನ್ನು ಅನೇಕರು ಬೆಂಬಲಿಸಿದ್ದಾರೆ.

ಬೆಂಕಿಗೆ ತುಪ್ಪ ಸುರಿದಂತೆ, ಸಮಾ ಟಿವಿ ಎಂಬ ಪಾಡ್‌ಕಾಸ್ಟ್‌ ಚಾನೆಲ್‌ ಕೂಡ ಸುದ್ದಿಯೊಂದನ್ನು ಬಿತ್ತರಿಸಿದ್ದು, ಮೂರು ವರ್ಷಗಳಿಂದ ಮಲಿಕ್‌ ಮತ್ತು ಸನಾ ಅವರು ವಿವಾಹೇತರ ಸಂಬಂಧ ಹೊಂದಿದ್ದರು. ಸನಾ ಅವರು ಮೂರು ತಿಂಗಳ ಹಿಂದೆಯಷ್ಟೇ ತನ್ನ ಮಾಜಿ ಪತಿ ಉಮೈರ್‌ ಜೈಸ್ವಾಲ್‌ನಿಂದ ವಿಚ್ಛೇದನ ಪಡೆದಿದ್ದರು ಎಂದು ಪ್ರಸಾರ ಮಾಡಿದೆ. 

ADVERTISEMENT

‘ವಾಹಿನಿಯಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಮಲಿಕ್ ಅವರನ್ನು ಆಹ್ವಾನಿಸಿದಾಗಲೆಲ್ಲಾ, ಸನಾ ಅವರನ್ನು ಸಹ ಕರೆಯಬೇಕು ಎಂಬ ಷರತ್ತಿನ ಮೇಲೆ ಮಾತ್ರ ಭಾಗವಹಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಅವರು ನಿಕಟ ಸಂಬಂಧ ಹೊಂದಿದ್ದರು’ ಎಂದು ಸುದ್ದಿವಾಹಿನಿ ನಿರ್ಮಾಪಕರು ಹೇಳಿದರು.

‘ಉಮೈರ್‌ಗೆ ಈ ಬಗ್ಗೆ ತಿಳಿದಿರಲಿಲ್ಲ. ಆದರೆ, ಸಾನಿಯಾ ಮಿರ್ಜಾ ಮತ್ತು ಅವರ ಕುಟುಂಬ ಹಾಗೂ ಮಲಿಕ್  ಕುಟುಂಬಕ್ಕೆ ಕಳೆದ ವರ್ಷ ಈ ವಿಷಯ ಗೊತ್ತಾಯಿತು. ಪರಿಸ್ಥಿತಿಯನ್ನು ಪರಿಹರಿಸಲು ಪ್ರಯತ್ನಗಳು ನಡೆದವು. ಆದರೆ, ಮಲಿಕ್ ಯಾರ ಮಾತನ್ನೂ ಕೇಳಲಿಲ್ಲ’ ಎಂದು ನಿರ್ಮಾಪಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.