ADVERTISEMENT

ಕೆ.ಎಲ್. ರಾಹುಲ್ ಕೀಪಿಂಗ್ ಮಾಡಲಿ: ಸಂಜಯ್ ಬಾಂಗರ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:45 IST
Last Updated 5 ಫೆಬ್ರುವರಿ 2025, 16:45 IST
<div class="paragraphs"><p>ಸಂಜಯ್ ಬಾಂಗರ್</p></div>

ಸಂಜಯ್ ಬಾಂಗರ್

   

ಬೆಂಗಳೂರು: ಏಕದಿನ ಕ್ರಿಕೆಟ್‌ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಹೊಣೆಯನ್ನು ಕೆ.ಎಲ್. ರಾಹುಲ್ ಅವರಿಗೆ ವಹಿಸುವುದು ಸೂಕ್ತ. 2023ರ ವಿಶ್ವಕಪ್ ಟೂರ್ನಿಯಲ್ಲಿ ಅವರು ಕೀಪಿಂಗ್ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ಸಂಜಯ್ ಬಾಂಗರ್ ಅಭಿಪ್ರಾಯಪಟ್ಟಿದ್ದಾರೆ.

‘ರಿಷಭ್ ಪಂತ್ ಅವರು ನಿಸ್ಸಂದೇಹವಾಗಿ ಅದ್ಭುತ ಪ್ರತಿಭಾವಂತ ಆಟಗಾರ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಮೂಲಕ ಕೀಪಿಂಗ್ ಪ್ರಯೋಗ ಆರಂಭಿಸುವುದು ಒಳಿತು. ಅಲ್ಲದೇ ಅವರು ಮಧ್ಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗಿರುವುದನ್ನು ಇಲ್ಲಿ ಪರಿಗಣಿಸಬೇಕು’ ಎಂದು ಸ್ಟಾರ್ ಸ್ಪೋರ್ಟ್ಸ್ ರೌಂಡ್‌ ಟೇಬಲ್ ಕಾರ್ಯಕ್ರಮದಲ್ಲಿ ಸಂಜಯ್ ಹೇಳಿದರು. 

ADVERTISEMENT

‘ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ಉಳಿದ ಬೌಲರ್‌ಗಳ ಹೊಣೆ ಹೆಚ್ಚುತ್ತದೆ. ಮಧ್ಯದ ಓವರ್‌ಗಳಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಪರಿಣಾಕಾರಿಯಾಗಿದ್ದರೆ. ವರುಣ ಚಕ್ರವರ್ತಿ ಕೂಡ ಪ್ರಭಾವ ಬೀರಬಲ್ಲರು. ಏನಾದರೂ ಬೂಮ್ರಾ ಅವರ ಸ್ಥಾನವನ್ನು ತುಂಬುವುದು ಯಾರಿಗೂ ಸಾಧ್ಯವಿಲ್ಲ’ ಎಂದು ಹೇಳಿದರು. 

‘ಏಕದಿನ ಕ್ರಿಕೆಟ್‌ನಿಂದ ಮೊಹಮ್ಮಸ್ ಸಿರಾಜ್ ಅವರನ್ನು ಕೈಬಿಟ್ಟಿರುವುದು ನನಗೆ ತುಸು ಅಚ್ಚರಿಯೆನಿಸಿತು’ ಎಂದೂ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.