ADVERTISEMENT

ರಣಜಿ ಟ್ರೋಫಿ: ಸರ್ಫರಾಜ್‌ ಅಜೇಯ ಶತಕ

ಮುಂಬೈ ತಂಡದ ಹೋರಾಟ

ಪಿಟಿಐ
Published 21 ಜನವರಿ 2020, 20:00 IST
Last Updated 21 ಜನವರಿ 2020, 20:00 IST
ಸರ್ಫರಾಜ್‌ ಖಾನ್
ಸರ್ಫರಾಜ್‌ ಖಾನ್    

ಮುಂಬೈ: ಯುವ ಆಟಗಾರ ಸರ್ಫರಾಜ್‌ ಖಾನ್‌ಅವರ ಅಜೇಯ ಶತಕದ ನೆರವಿನಿಂದ ಮುಂಬೈ ತಂಡ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಉತ್ತರಪ್ರದೇಶದ ವಿರುದ್ಧ ಹೋರಾಟ ತೋರುತ್ತಿದೆ. ಆದರೆ ಮೊದಲ ಇನಿಂಗ್ಸ್‌ ಮುನ್ನಡೆಗಾಗಿ ಇನ್ನೂ ದೀರ್ಘ ಹಾದಿ ಸವೆಸಬೇಕಾಗಿದೆ.

ಉತ್ತರಪ್ರದೇಶದ 625 (8 ವಿಕೆಟ್‌ಗೆ ಡಿಕ್ಲೇರ್ಡ್‌) ರನ್‌ಗಳಿಗೆ ಉತ್ತರವಾಗಿ ಮುಂಬೈ ಮೂರನೇ ದಿನವಾದ ಮಂಗಳವಾರ ಆಟ ಮುಗಿದಾಗ 5 ವಿಕೆಟ್‌ಗೆ 353 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಬೇಕಾದರೆ ಮುಂಬೈ ಇನ್ನೂ 272 ರನ್‌ ಗಳಿಸಬೇಕಾಗಿದೆ.

ಸೋಮವಾರ 2 ವಿಕೆಟ್‌ಗೆ 20 ರನ್‌ಗಳಿಸಿ ಸಂಕಷ್ಟದಲ್ಲಿದ್ದ ಹಲವು ಬಾರಿಯ ಚಾಂಪಿಯನ್‌ ಮುಂಬೈಗೆ ಮಂಗಳವಾರದ ಆಟದಲ್ಲಿ ಅನುಭವಿ ಆಟಗಾರ ಸಿದ್ದೇಶ್‌ ಲಾಡ್‌ (174 ಎಸೆತಗಳಲ್ಲಿ 98) ಮತ್ತು ಸರ್ಫರಾಜ್‌ ಆಸರೆಯಾದರು. ಇವರಿಬ್ಬರು ಐದನೇ ವಿಕೆಟ್‌ಗೆ 210 ರನ್‌ ಸೇರಿಸಿದರು. 22 ವರ್ಷದ ಸರ್ಫರಾಜ್‌ ಆಕ್ರಮಣಕಾರಿ ಯಾಗಿದ್ದು, 160 ಎಸೆತಗಳಲ್ಲಿ 14 ಬೌಂಡರಿ, ಆರು ಸಿಕ್ಸರ್‌ಗಳಿದ್ದ 132 ರನ್ ಬಾರಿಸಿದರು.

ADVERTISEMENT

ಸ್ಕೋರುಗಳು: ಮುಂಬೈನಲ್ಲಿ: ಉತ್ತರ ಪ್ರದೇಶ: 8 ವಿಕೆಟ್‌ಗೆ 625 ಡಿಕ್ಲೇರ್ಡ್‌; ಮುಂಬೈ: 90 ಓವರುಗಳಲ್ಲಿ 5 ವಿಕೆಟ್‌ಗೆ 353 (ಎಚ್‌.ಜೆ.ತಮೋರೆ 51, ಸಿದ್ದೇಶ್‌ ಲಾಡ್‌ 98, ಸರ್ಫರಾಜ್‌ ಬ್ಯಾಟಿಂಗ್ 132; ಅಂಕಿತ್‌ ರಾಜಪೂತ್‌ 63ಕ್ಕೆ3).

ಇಂದೋರ್‌ನಲ್ಲಿ: ಸೌರಾಷ್ಟ್ರ: 344 ಮತ್ತು 46 ಓವರುಗಳಲ್ಲಿ 2 ವಿಕೆಟ್‌ಗೆ 165 (ಹರ್ವಿಕ್‌ ದೇಸಾಯಿ ಬ್ಯಾಟಿಂಗ್ 65, ಚೇತೇಶ್ವರ ಪೂಜಾರ ಬ್ಯಾಟಿಂಗ್ 64); ಮಧ್ಯಪ್ರದೇಶ: 106.4 ಓವರು ಗಳಲ್ಲಿ 280 (ವೆಂಕಟೇಶ ಅಯ್ಯರ್‌ 75, ಯಶ್‌ ದುಬೆ 74; ಜಯದೇವ ಉನದ್ಕತ್‌ 45ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.