ADVERTISEMENT

PAK vs BNG | ಮೊದಲ ಟೆಸ್ಟ್‌: ಬಾಂಗ್ಲಾ ಹೋರಾಟ

ಶತಕ ತಪ್ಪಿಸಿಕೊಂಡ ಶಾದ್ಮನ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:40 IST
Last Updated 23 ಆಗಸ್ಟ್ 2024, 15:40 IST
   

ರಾವಲ್ಪಿಂಡಿ : ಆರಂಭ ಆಟಗಾರ ಶಾದ್ಮನ್ ಇಸ್ಲಾಂ ಅವರು ಕೇವಲ ಏಳು ರನ್‌ಗಳಿಂದ ಶತಕ ತಪ್ಪಿಸಿಕೊಂಡರೂ, ಬಾಂಗ್ಲಾದೇಶ ತಂಡ, ಮೊದಲ ಟೆಸ್ಟ್‌ನ ಮೂರನೆ ದಿನವಾದ ಶುಕ್ರವಾರ ಪಾಕಿಸ್ತಾನದ ಎದುರು ದಿಟ್ಟ ಹೋರಾಟ ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಾಕಿಸ್ತಾನ 6 ವಿಕೆಟ್‌ಗೆ 448 ರನ್‌ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತ್ತು. ಗುರುವಾರ ವಿಕೆಟ್‌ ನಷ್ಟವಿಲ್ಲದೇ 22 ರನ್ ಗಳಿಸಿದ್ದ ಪ್ರವಾಸಿ ತಂಡದ ಪರ ಶಾದ್ಮನ್‌ 93 ರನ್ ಗಳಿಸಿದರು. ಮೊಮಿನುಲ್ ಹಕ್ (50), ಮುಷ್ಫಿಕುರ್ ರಹೀಂ (ಅಜೇಯ 55) ಮತ್ತು ಲಿಟ್ಟನ್ ದಾಸ್ (ಔಟಾಗದೇ 52) ಅವರೂ ಅರ್ಧಶತಕಗಳನ್ನು ಬಾರಿಸಿದರು. ಮುರಿಯದ ಆರನೇ ವಿಕೆಟ್‌ಗೆ ರಹೀಂ ಮತ್ತು ದಾಸ್  98 ರನ್ ಸೇರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 6 ವಿಕೆಟ್‌ಗೆ 448 ಡಿಕ್ಲೇರ್‌; ಬಾಂಗ್ಲಾದೇಶ: 92 ಓವರುಗಳಲ್ಲಿ 5 ವಿಕೆಟ್‌ಗೆ 316 (ಶಾದ್ಮನ್ ಇಸ್ಲಾಂ 93, ಮೊಮಿನುಲ್ ಹಕ್ 50, ಮುಷ್ಫಿಕುರ್ ರಹೀಂ ಔಟಾಗದೇ 55, ಲಿಟ್ಟನ್ ದಾಸ್‌ ಔಟಾಗದೇ 52; ಖುರ್ರಂ ಶಹಜಾದ್‌ 47ಕ್ಕೆ2).

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.