ನವದೆಹಲಿ: ಆಕ್ರಮಣಕಾರಿ ಆರಂಭ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತ ಮಹಿಳಾ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಏಳು ತಿಂಗಳ ನಂತರ ಶಫಾಲಿ ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ ಅವರು ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಐದು ಪಂದ್ಯಗಳ ಸರಣಿ ಜೂನ್ 28ರಂದು ಟ್ರೆಂಟ್‌ಬ್ರಿಜ್‌ನಲ್ಲಿ ಆರಂಭವಾಗಲಿದೆ. ಶಫಾಲಿ 2024ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡಕ್ಕೆ ಆಡಿದ್ದರು. ಡಬ್ಲ್ಯುಪಿಎಲ್‌ನಲ್ಲಿ ಅವರು ಡೆಲ್ಲಿ ತಂಡ ಪರ 152ರ ಸ್ಟ್ರೈಕ್‌ರೇಟ್‌ನಲ್ಲಿ 304 ರನ್ ಪೇರಿಸಿದ್ದರು. ಮಣಿಕಟ್ಟಿನ ಗಾಯದಿಂದ ಚಿಕಿತ್ಸೆಯಲ್ಲಿದ್ದ ವಿಕೆಟ್ ಕೀಪರ್– ಬ್ಯಾಟರ್ ಯಷ್ಟಿಕಾ ಭಟಿಯಾ ಅವರೂ ತಂಡಕ್ಕೆ ಮರಳಿದ್ದಾರೆ. ಅವರು ಟಿ20, ಏಕದಿನ ಎರಡೂ ತಂಡದಲ್ಲಿದ್ದಾರೆ.
ಭಾರತ ಐದು ಟಿ20 ಪಂದ್ಯಗಳ ನಂತರ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಎರಡೂ ಮಾದರಿಗಳಿಗೆ 15 ಮಂದಿಯ ತಂಡ ಪ್ರಕಟಿಸಲಾಗಿದೆ.
ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂದಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಷ್ಟಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ಶುಚಿ ಉಪಾಧ್ಯಾಯ, ಅಮನ್ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಸಯಾಲಿ ಸಾತ್ಗರೆ.
ಏಕದಿನ ತಂಡದಲ್ಲಿ ಪ್ರತಿಕಾ ರಾವಲ್, ತೇಜಲ್ ಹಸಬ್ನಿಸ್ ಸ್ಥಾನ ಪಡೆದಿದ್ದು, ಶಫಾಲಿ ಅವರನ್ನು ಸೇರ್ಪಡೆ ಮಾಡಿಲ್ಲ.
ಭಾರತ ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸ ವೇಳಾಪಟ್ಟಿ
ಮೊದಲ ಟಿ20; ಜೂನ್ 28; ನಾಟಿಂಗ್‌ಹ್ಯಾಮ್
ಎರಡನೇ ಟಿ20; ಜುಲೈ 1; ಬ್ರಿಸ್ಟಲ್
ಮೂರನೇ ಟಿ20; ಜುಲೈ 4; ಲಂಡನ್
ನಾಲ್ಕನೇ ಟಿ20; ಜುಲೈ 9; ಮ್ಯಾಂಚೆಸ್ಟರ್
ಐದನೇ ಟಿ20; ಜುಲೈ 12; ಎಜ್ಬಾಸ್ಟನ್
ಮೊದಲ ಏಕದಿನ; ಜುಲೈ 16; ಸೌತಾಂಪ್ಟನ್
ಎರಡನೇ ಏಕದಿನ; ಜುಲೈ 19; ಲಾರ್ಡ್ಸ್
ಮೂರನೇ ಏಕದಿನ; ಜುಲೈ 22; ಚೆಸ್ಟರ್–ಲಿ ಸ್ಟ್ರೀಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.