ADVERTISEMENT

ಆಸ್ಟ್ರೇಲಿಯಾಗೆ ಬಾಂಗ್ಲಾದೇಶ ಆಘಾತ

ಏಜೆನ್ಸೀಸ್
Published 9 ಆಗಸ್ಟ್ 2021, 17:35 IST
Last Updated 9 ಆಗಸ್ಟ್ 2021, 17:35 IST
ಪಂದ್ಯ ಗೆದ್ದ ನಂತರ ಬಾಂಗ್ಲಾದೇಶದ ಮೊಹಮ್ಮದ್‌ ಸೈಫುದ್ದೀನ್ ತಂಡದೊಂದಿಗೆ ಸೆಲ್ಫಿ ತೆಗೆದುಕೊಂಡರು –ಎಎಫ್‌ಪಿ ಚಿತ್ರ
ಪಂದ್ಯ ಗೆದ್ದ ನಂತರ ಬಾಂಗ್ಲಾದೇಶದ ಮೊಹಮ್ಮದ್‌ ಸೈಫುದ್ದೀನ್ ತಂಡದೊಂದಿಗೆ ಸೆಲ್ಫಿ ತೆಗೆದುಕೊಂಡರು –ಎಎಫ್‌ಪಿ ಚಿತ್ರ   

ಢಾಕಾ: ಶಕೀಬ್‌ ಅಲ್ ಹಸನ್ ನಾಲ್ಕು ವಿಕೆಟ್ ಗಳಿಸಿ ಸಂಭ್ರಮಿಸಿದರು. ಇದರ ಪರಿಣಾಮ ಆಸ್ಟ್ರೇಲಿಯಾ ಟಿ20 ಕ್ರಿಕೆಟ್‌ನಲ್ಲಿ ತನ್ನ ಕನಿಷ್ಠ ರನ್‌ಗಳಿಗೆ ಪತನ ಕಂಡಿತು. ಸೋಮವಾರ ನಡೆದ ಟಿ20 ಸರಣಿಯ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 60 ರನ್‌ಗಳಿಂದ ಮಣಿಸಿದ ಬಾಂಗ್ಲಾದೇಶ 4–1ರಲ್ಲಿ ಜಯ ಸಾಧಿಸಿತು.

123 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 13.4 ಓವರ್‌ಗಳಲ್ಲಿ 62 ರನ್‌ಗಳಿಗೆ ಪತನಗೊಂಡಿತು.ಎಡಗೈ ಸ್ಪಿನ್ನರ್ ಶಕೀಬ್‌ ಒಂಬತ್ತು ರನ್‌ಗಳಿಗೆ ನಾಲ್ಕು ವಿಕೆಟ್ ಗಳಿಸಿದರು. ಮಧ್ಯಮ ವೇಗಿ ಮೊಹಮ್ಮದ್ ಸೈಫುದ್ದೀನ್ ಎರಡು ವಿಕೆಟ್ ಉರುಳಿಸಿದರು. ಆಸ್ಟ್ರೇಲಿಯಾದ ಈ ಹಿಂದಿನ ಕನಿಷ್ಠ ಮೊತ್ತ 79 ರನ್ ಆಗಿತ್ತು(2005).

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 8ಕ್ಕೆ 122 (ಮೆಹದಿ ಹಸನ್ 13, ಮೊಹಮ್ಮದ್ ನಯೀಮ್‌ 23, ಶಕೀಬ್ ಅಲ್‌ ಹಸನ್‌ 11, ಸೌಮ್ಯ ಸರ್ಕಾರ್ 16, ಮಹಮ್ಮದುಲ್ಲ ರಿಯಾದ್‌ 19;ಆ್ಯಷ್ಟನ್ ಟರ್ನರ್‌ 16ಕ್ಕೆ1, ಆ್ಯಷ್ಟನ್ ಅಗರ್ 28ಕ್ಕೆ1, ಆ್ಯಡಂ ಜಂಪಾ 24ಕ್ಕೆ1, ನೇಥನ್‌ ಎಲಿಸ್‌ 16ಕ್ಕೆ2, ಡ್ಯಾನ್ ಕ್ರಿಸ್ಟಿಯನ್ 17ಕ್ಕೆ2); ಆಸ್ಟ್ರೇಲಿಯಾ: 13.4 ಓವರ್‌ಗಳಲ್ಲಿ 62 (ಡ್ಯಾನ್ ಕ್ರಿಸ್ಟಿಯನ್‌ 3, ಮ್ಯಾಥ್ಯೂ ವೇಡ್‌ 22, ಮಿಷೆಲ್ ಮಾರ್ಷ್‌ 4, ಬೆನ್‌ ಮೆಕ್‌ಡರ್ಮಟ್‌ 17, ಅಲೆಕ್ಸ್ ಕ್ಯಾರಿ 3, ಮೊಯಿಸಸ್‌ ಹೆನ್ರಿಕ್ಸ್‌ 3, ಆ್ಯಷ್ಟನ್ ಟರ್ನರ್ 1,ಆ್ಯಷ್ಟನ್ ಅಗರ್‌ 2, ನೇಥನ್ ಎಲಿಸ್ 1, ಆ್ಯಡಂ ಜಂಪಾ 4; ನಸುಮ್ ಅಹಮ್ಮದ್‌ 8ಕ್ಕೆ2, ಸೈಫುದ್ದೀನ್ 12ಕ್ಕೆ3 ಶಕೀಬ್ ಅಲ್ ಹಸನ್ 9ಕ್ಕೆ4, ಮಹಮ್ಮದುಲ್ಲ 9ಕ್ಕೆ1). ಫಲಿತಾಂಶ: ಬಾಂಗ್ಲಾದೇಶಕ್ಕೆ 60 ರನ್‌ಗಳ ಜಯ; 5 ಪಂದ್ಯಗಳ ಸರಣಿಯಲ್ಲಿ 4–1ರ ಗೆಲುವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.