ADVERTISEMENT

ಶೇನ್‌ ವಾರ್ನ್‌ ನಿಧನ: ಕಪ್ಪು ಪಟ್ಟಿ ಧರಿಸಿದ ಭಾರತ, ಶ್ರೀಲಂಕಾ ತಂಡ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 7:17 IST
Last Updated 5 ಮಾರ್ಚ್ 2022, 7:17 IST
ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದ ಹೊರಗಿರುವ ಶೇನ್‌ ವಾರ್ನ್‌ ಪ್ರತಿಮೆ. ರಾಯಿಟರ್ಸ್‌ ಚಿತ್ರ
ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದ ಹೊರಗಿರುವ ಶೇನ್‌ ವಾರ್ನ್‌ ಪ್ರತಿಮೆ. ರಾಯಿಟರ್ಸ್‌ ಚಿತ್ರ   

ಮೊಹಾಲಿ: ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌ ಮತ್ತು ರಾಡ್‌ ಮಾರ್ಷ್‌ ಅವರ ಸಾವಿಗೆ ಸಂತಾಪ ಸೂಚಿಸಿ ಭಾರತ ಮತ್ತು ಶ್ರೀಲಂಕಾದ ಕ್ರಿಕೆಟ್‌ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದರು. ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನ ಆಟ ಆರಂಭಿಸುವ ಮೊದಲು ಒಂದು ನಿಮಿಷದ ಮೌನಾಚರಣೆ ಸಲ್ಲಿಸಿದರು.

ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ, ವಿಕೆಟ್‌ ಕೀಪರ್‌, 74 ವರ್ಷದ ರಾಡ್‌ ಮಾರ್ಷ್‌ ಹೃದಯಾಘಾತದಿಂದ ಶುಕ್ರವಾರ ಮೃತರಾದರು. ಕೆಲವೇ ಗಂಟೆಗಳಲ್ಲಿ ಥಾಯ್ಲೆಂಡ್‌ ಪ್ರವಾಸದಲ್ಲಿದ್ದ 52 ವರ್ಷದ ಶೇನ್‌ ವಾರ್ನ್‌ ಕೂಡ ಹೃದಯಾಘಾತದಿಂದ ನಿಧನರಾದರು.

'ಮೊದಲ ಟೆಸ್ಟ್‌ನ 2ನೇ ದಿನ ಪಂದ್ಯ ಆರಂಭಿಸುವ ಮೊದಲು 1 ನಿಮಿಷದ ಮೌನಾಚರಣೆ ಸಲ್ಲಿಸುವ ಮೂಲಕ ನಿನ್ನೆ ಮೃತರಾದ ರಾಡ್‌ ಮಾರ್ಷ್‌ ಮತ್ತು ಶೇನ್‌ ವಾರ್ನ್‌ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಭಾರತ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಲಿದ್ದಾರೆ' ಎಂದು ಬಿಸಿಸಿಐ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.