ADVERTISEMENT

ಆರು ಎಸೆತ, ಆರು ಸಿಕ್ಸರ್‌ ಸಿಡಿಸಿದ ಅಫ್ಗಾನಿಸ್ತಾನದ ಹಜರತ್‌ಉಲ್ಲಾ ಜಜಾಯ್‌

ಹೊಸ ದಾಖಲೆ

ರಾಯಿಟರ್ಸ್
Published 15 ಅಕ್ಟೋಬರ್ 2018, 11:18 IST
Last Updated 15 ಅಕ್ಟೋಬರ್ 2018, 11:18 IST
ಹಜರತ್‌ಉಲ್ಲಾ ಜಜಾಯ್‌
ಹಜರತ್‌ಉಲ್ಲಾ ಜಜಾಯ್‌   

ಶಾರ್ಜಾ: ಅಫ್ಗಾನಿಸ್ತಾನದ ಹಜರತ್‌ಉಲ್ಲಾ ಜಜಾಯ್‌, ಅಫ್ಗಾನಿಸ್ತಾನ ಪ್ರೀಮಿಯರ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಬಲ್ಕ್‌ ಲೆಜೆಂಡ್ಸ್‌ ತಂಡದ ಎದುರಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿ ದಾಖಲೆ ಬರೆದಿದ್ದಾರೆ.

ಕಾಬುಲ್‌ ಜ್ವಾನನ್‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ 20 ವರ್ಷ ವಯಸ್ಸಿನ ಹಜರತ್‌ಉಲ್ಲಾ, ಎಡಗೈ ಸ್ಪಿನ್ನರ್‌ ಅಬ್ದುಲ್ಲಾ ಮಜಾರಿ ಹಾಕಿದ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು. ಈ ಓವರ್‌ನಲ್ಲಿ ಅಬ್ದುಲ್ಲಾ ವೈಡ್‌ ಸೇರಿದಂತೆ ಒಟ್ಟು 37ರನ್‌ ನೀಡಿದರು.

ಜಜಾಯ್‌, ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ ವಿಶ್ವದ ಆರನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ADVERTISEMENT

ಭಾರತದ ರವಿಶಾಸ್ತ್ರಿ, ಯುವರಾಜ್‌ ಸಿಂಗ್‌, ವೆಸ್ಟ್‌ ಇಂಡೀಸ್‌ನ ಗ್ಯಾರಿ ಸೋಬರ್ಸ್‌, ದಕ್ಷಿಣ ಆಫ್ರಿಕಾದ ಹರ್ಷಲ್‌ ಗಿಬ್ಸ್‌ ಮತ್ತು ಇಂಗ್ಲೆಂಡ್‌ನ ರಾಸ್‌ ವೈಟ್‌ಲೀ ಅವರು ಮೊದಲ ಈ ಸಾಧನೆ ಮಾಡಿದ್ದರು.‌

12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜಜಾಯ್‌, ಭಾರತದ ಯುವರಾಜ್‌ ಸಿಂಗ್‌ ಮತ್ತು ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಅವರ ದಾಖಲೆ ಸರಿಗಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.