
ಪಿಟಿಐ
ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ರಾಯಪುರದಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನಿಯಮಿತ ಅವಧಿಯೊಳಗೆ ಕಡಿಮೆ ಓವರುಗಳನ್ನು ಮಾಡಿದ್ದಕ್ಕೆ ಭಾರತ ತಂಡಕ್ಕೆ ಸೋಮವಾರ ಪಂದ್ಯ ಸಂಭಾವನೆಯ ಶೇ 10ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.
ಡಿಸೆಂಬರ್ 3ರಂದು ನಡೆದ ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡು ಮೂರು ಪಂದ್ಯಗಳ ಸರಣಿ 1–1 ಸಮಮಾಡಿಕೊಂಡಿತ್ತು. ಕೆ.ಎಲ್.ರಾಹುಲ್ ಸಾರಥ್ಯದ ಭಾರತ ತಂಡವು ವಿಶಾಖಪಟ್ಟಣದಲ್ಲಿ ನಡೆದ ಕೊನೆಯ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.