ADVERTISEMENT

ನಾಲ್ಕನೇ ಸ್ಥಾನಕ್ಕೆ ಸ್ಮೃತಿ ಮಂದಾನ

ಐಸಿಸಿ ಟ್ವೆಂಟಿ–20 ರ‍್ಯಾಂಕಿಂಗ್‌

ಪಿಟಿಐ
Published 14 ಫೆಬ್ರುವರಿ 2020, 17:29 IST
Last Updated 14 ಫೆಬ್ರುವರಿ 2020, 17:29 IST
ಸ್ಮೃತಿ ಮಂದಾನ–ಪಿಟಿಐ ಚಿತ್ರ
ಸ್ಮೃತಿ ಮಂದಾನ–ಪಿಟಿಐ ಚಿತ್ರ   

ದುಬೈ: ಭಾರತದ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಟ್ವೆಂಟಿ–20 ರ‍್ಯಾಂಕಿಂಗ್‌ನ ಬ್ಯಾಟ್ಸ್‌ವುಮನ್‌ಗಳ ವಿಭಾಗದಲ್ಲಿ ಶುಕ್ರವಾರ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆದರೆ ಜೆಮಿಮಾ ರಾಡ್ರಿಗಸ್‌ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌ ಒಂಬತ್ತನೇ ಸ್ಥಾನದಲ್ಲೇ ಮುಂದುವರಿದಿದ್ದು, ಬೌಲರ್‌ಗಳ ಪಟ್ಟಿಯಲ್ಲಿ ಪೂನಮ್‌ ಯಾದವ್‌ 12ನೇ ಸ್ಥಾನಕ್ಕೆ ಜಾರಿದ್ದಾರೆ.

ಬೌಲರ್‌ಗಳ ವಿಭಾಗದ ಅಗ್ರಸ್ಥಾನವನ್ನು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್‌ ಅಲಂಕರಿಸಿದ್ದಾರೆ. ಅವರದೇ ತಂಡದ ಸೋಫಿ ಡಿವೈನ್‌ ಎರಡನೇ ಸ್ಥಾನದಲ್ಲಿದ್ದಾರೆ.

ADVERTISEMENT

ತ್ರಿಕೋನ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದ ಮಂದಾನ ಹಾಗೂ ಆಸ್ಟ್ರೇಲಿಯಾದ ಆರಂಭದ ಆಟಗಾರ್ತಿ ಬೆತ್‌ ಮೂನಿ (ಮೂರನೇ ಸ್ಥಾನ) ಅವರ ಸ್ಥಾನಗಳಲ್ಲಿ ಏರಿಕೆಯಾಗಿದೆ.

ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಆಸ್ಟ್ರೇಲಿಯಾದ ಎಲಿಸ್‌ ಪೆರಿ, ಬೌಲರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ.

ಆಲ್‌ರೌಂಡರ್‌ಗಳ ವಿಭಾಗದಲ್ಲಿ ಸೋಫಿ ಡಿವೈನ್‌ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್‌ನ ನತಾಲಿ ಸ್ಕಿವರ್‌ ಅವರನ್ನು ಹಿಂಬಾಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.