ADVERTISEMENT

ಆಸ್ಟ್ರೇಲಿಯಾ ಮಹಿಳಾ ಟಿ20 ತಂಡಕ್ಕೆ ಸೋಫಿ ಮಾಲಿನೆ ನಾಯಕಿ

ಪಿಟಿಐ
Published 29 ಜನವರಿ 2026, 15:24 IST
Last Updated 29 ಜನವರಿ 2026, 15:24 IST
<div class="paragraphs"><p>ಸೋಫಿ ಮಾಲಿನೆ</p></div>

ಸೋಫಿ ಮಾಲಿನೆ

   

ಸಿಡ್ನಿ: ಆಸ್ಟ್ರೇಲಿಯಾ ಮಹಿಳಾ ಟಿ20 ಕ್ರಿಕೆಟ್ ತಂಡಕ್ಕೆ ಸೋಫಿ ಮಾಲಿನೆ ಅವರನ್ನು ನೂತನ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳಿಗೆ ಅಲಿಸಾ ಹೀಲಿ ಅವರು ನಾಯಕಿಯಾಗಿದ್ದಾರೆ. 

ಮುಂದಿನ ತಿಂಗಳು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಅದರಲ್ಲಿ ಆಸ್ಟ್ರೇಲಿಯಾ ಟಿ20 ಕ್ರಿಕೆಟ್ ತಂಡವನ್ನು ಸೋಫಿ ಮುನ್ನಡೆಸಲಿದ್ದಾರೆ. 

ADVERTISEMENT

ಅಲೀಸಾ ಹೀಲಿ ಅವರು ಭಾರತದಲ್ಲಿ ನಡೆಯುವ ಮೂರು ಏಕದಿನ ಪಂದ್ಯಗಳು ಮತ್ತು ಏಕೈಕ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸುವರು. ತದನಂತರ ನಿವೃತ್ತಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆದ್ದರಿಂದ ಟಿ20 ಬಳಗಕ್ಕೆ ಸೋಫಿ ನಾಯಕಿಯಾಗಿದ್ದಾರೆ. 

ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಸಿಡ್ನಿ (ಫೆ. 15), ಕ್ಯಾನ್‌ಬೆರಾ (ಫೆ. 19) ಮತ್ತು ಅಡಿಲೇಡ್‌ (ಫೆ 21)ನಲ್ಲಿ ಪಂದ್ಯಗಳು ನಡೆಯಲಿವೆ. 

ಏಕದಿನ ಪಂದ್ಯಗಳು ಫೆ 24, 27 ಮತ್ತು ಮಾರ್ಚ್ 1ರಂದು ನಡೆಯಲಿವೆ. ಪರ್ಥ್‌ನಲ್ಲಿ ಟೆಸ್ಟ್ ಪಂದ್ಯವು ಮಾರ್ಚ್‌ 6ರಿಂದ ಆರಂಭವಾಗಲಿದೆ. 

ಮಾರ್ಚ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಸೋಫಿ ಅವರು ಎಲ್ಲ ಮಾದರಿಗಳ ತಂಡಕ್ಕೆ ನಾಯಕಿಯಾಗುವರು. 28 ವರ್ಷದ ಸೋಫಿ ಎಡಗೈ ಸ್ಪಿನ್‌ ಆಲ್‌ರೌಂಡರ್ ಆಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.