ADVERTISEMENT

ಎನ್‌ಸಿಎನಲ್ಲಿ ಗಂಗೂಲಿ–ದ್ರಾವಿಡ್ ಭೇಟಿ ನಾಳೆ

ಪಿಟಿಐ
Published 29 ಅಕ್ಟೋಬರ್ 2019, 5:57 IST
Last Updated 29 ಅಕ್ಟೋಬರ್ 2019, 5:57 IST
ರಾಹುಲ್ ದ್ರಾವಿಡ್, ಸೌರವ್‌ ಗಂಗೂಲಿ
ರಾಹುಲ್ ದ್ರಾವಿಡ್, ಸೌರವ್‌ ಗಂಗೂಲಿ   

ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಬಹುಕಾಲ ಜೊತೆಯಾಗಿ ಆಡಿದ್ದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರು ಬುಧವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಭೇಟಿಯಾಗಲಿದ್ದಾರೆ.

ಬಿಸಿಸಿಐನ ಅಧ್ಯಕ್ಷರಾದ ನಂತರ ಇದೇ ಮೊದಲ ಸಲ ಗಂಗೂಲಿ ಅವರು ಎನ್‌ಸಿಎಗೆ ಭೇಟಿ ನೀಡುತ್ತಿದ್ದಾರೆ. ಅಕಾಡೆಮಿಯ ಮುಖ್ಯಸ್ಥರಾಗಿ ಹೋದ ಜುಲೈನಲ್ಲಿ ಅಧಿಕಾರ ವಹಿಸಿಕೊಂಡಿರುವ ದ್ರಾವಿಡ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ಬಿಸಿಸಿಐನ ನೂತನ ಪದಾಧಿಕಾರಿಗಳು ಹಾಜರಿರುವರು. ಎನ್‌ಸಿಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತೂಫಾನ್ ಘೋಷ್ ಕೂಡ ಹಾಜರಿರುವರು. ಈ ಸಭೆಯಲ್ಲಿ ಎನ್‌ಸಿಎಯ ಸುಧಾರಣೆ ಮತ್ತು ಮುಂದಿನ ಯೋಜನೆಗಳ ರೂಪುರೇಷೆಯ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.