ADVERTISEMENT

ಡು ಪ್ಲೆಸಿ ದಕ್ಷಿಣ ಆಫ್ರಿಕಾ ತಂಡದ ನಾಯಕ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 19:50 IST
Last Updated 18 ಏಪ್ರಿಲ್ 2019, 19:50 IST
ಫಾಫ್‌ ಡು ಪ್ಲೆಸಿ
ಫಾಫ್‌ ಡು ಪ್ಲೆಸಿ   

ಕೇಪ್‌ಟೌನ್: ವಿಶ್ವಕಪ್‌ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು ಅನುಭವಿ ಆಟಗಾರರಿಗೆ ಮಣೆ ಹಾಕಿದೆ.

ಫಾಫ್‌ ಡು ಪ್ಲೆಸಿ ಹೆಗಲಿಗೆ ತಂಡದ ನಾಯಕತ್ವವನ್ನು ನೀಡಲಾಗಿದ್ದು, ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌, ಕಗಿಸೊ ರಬಾಡ ಮತ್ತು ಇಮ್ರಾನ್ ತಾಹಿರ್‌ ಸ್ಥಾನ ಗಳಿಸಿದ್ದಾರೆ. ಅನುಭವಿಗಳಾದ ಮಧ್ಯಮ ವೇಗಿ ಡೇಲ್‌ ಸ್ಟೇನ್, ಎಡಗೈ ಬ್ಯಾಟ್ಸ್‌ಮನ್‌ಗಳಾದ ಹಶೀಂ ಆಮ್ಲಾ ಮತ್ತು ಜೆ.ಪಿ.ಡುಮಿನಿ ಆಯ್ಕೆ ಆಗಿದ್ದಾರೆ.

ತಂಡ: ಫಾಫ್‌ ಡು ಪ್ಲೆಸಿ (ನಾಯಕ), ಹಶೀಂ ಆಮ್ಲಾ, ಕ್ವಿಂಟನ್ ಡಿಕಾಕ್‌, ಜೆಪಿ ಡುಮಿನಿ, ಏಡನ್ ಮಾರ್ಕರಮ್‌, ಡೇವಿಡ್‌ ಮಿಲ್ಲರ್‌, ಲುಂಗಿ ಗಿಡಿ, ಆ್ಯನ್ರಿಚ್‌ ನೊರ್ಜೆ, ಆ್ಯಂಡಿಲೆ ಪಿಶುವಾಯೊ,ಡ್ವೈನ್‌ ಪ್ರಿಟೋರಿಸ್, ಕಗಿಸೊ ರಬಾಡ, ತಬ್ರೇಜ್‌ ಶಂಸಿ, ಡೇಲ್‌ ಸ್ಟೇನ್, ಇಮ್ರಾನ್‌ ತಾಹಿರ್‌, ವ್ಯಾನ್‌ ಡೆರ್ ದೂಸೆನ್.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.