ADVERTISEMENT

IND vs SA T20| ಬೆಂಗಳೂರಿನಲ್ಲಿ 19ರಂದು ಟಿ20 ಕ್ರಿಕೆಟ್: 12ರಂದು ಟಿಕೆಟ್ ಮಾರಾಟ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 14:06 IST
Last Updated 4 ಜೂನ್ 2022, 14:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಇದೇ 19ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಪಂದ್ಯದ ಟಿಕೆಟ್ ಮಾರಾಟವು ಇದೇ 12ರಂದು ನಡೆಯಲಿದೆ. ಆನ್‌ಲೈನ್ ಮತ್ತು ಬಾಕ್ಸ್‌ ಆಫೀಸ್‌ನಲ್ಲಿ ಮಾರಾಟ ನಡೆಯಲಿದೆ ಎಂದು ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಕೆಎಸ್‌ಸಿಎಗೆ ಪೇಟಿಎಂ ಆನ್‌ಲೈನ್ ಟಿಕೆಟ್ ಮಾರಾಟದ ಪಾಲುದಾರನಾಗಿದೆ. ಬಾಕ್ಸ್ ಆಫಿಸ್‌ನಲ್ಲಿ ಮಾರಾಟವಾಗದೆ ಉಳಿಯುವ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಕರಿ ಮಾಡಲಾಗುವುದು. ಜೂನ್ 13ಕ್ಕೆ ಬಾಕ್ಸ್‌ ಆಫಿಸ್‌ನಲ್ಲಿ ಮಾರಾಟವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಟ್ಟಿ

ADVERTISEMENT

ಸ್ಟ್ಯಾಂಡ್;ಮೊತ್ತ (₹);ಗೇಟ್ ಸಂಖ್ಯೆ

ಬಾಕ್ಸ್‌ ಆಫೀಸ್‌ನಲ್ಲಿ ಮಾರಾಟ

ಜಿ ಅಪ್ಪರ್, ಲೋವರ್1, ಲೋವರ್ 2;750;5 –ಕಬ್ಬನ್ ರಸ್ತೆ

ಎ ಅಪ್ಪರ್, ಬಿ ಅಪ್ಪರ್ ಹಾಗೂ ಲೋವರ್;2000;2 –ಕಬ್ಬನ್ ರಸ್ತೆ

ಡಿ ಕಾರ್ಪೊರೇಟ್;4000;19–ಕ್ವೀನ್ಸ್‌ ರಸ್ತೆ

ಎನ್‌ ಸ್ಟ್ಯಾಂಡ್;5000;18–ಕ್ವೀನ್ಸ್‌ ರಸ್ತೆ

ಇ ಎಕ್ಸಿಕ್ಯುಟಿವ್;6000; 18– ಕ್ವೀನ್ಸ್‌ ರಸ್ತೆ

ಆನ್‌ಲೈನ್ ಮಾರಾಟ

ಗ್ರ್ಯಾಂಡ್ ಟೆರೆಸ್;6000

ಪಿ ಕಾರ್ಪೋರೆಟ್; 10000

ಪೆವಿಲಿಯನ್ ಟೆರೆಸ್;15000

ಪಿ2 ಸ್ಟ್ಯಾಂಡ್;20000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.