ADVERTISEMENT

ಕ್ರಿಕೆಟ್ : ದಕ್ಷಿಣ ಆಫ್ರಿಕಾ ಜಯಭೇರಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 18:37 IST
Last Updated 1 ಮಾರ್ಚ್ 2022, 18:37 IST
ಕಗಿಸೊ ರಬಾಡ
ಕಗಿಸೊ ರಬಾಡ   

ಕ್ರೈಸ್ಟ್‌ಚರ್ಚ್: ದಕ್ಷಿಣ ಆಫ್ರಿಕಾ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಪಡೆ ಕುಸಿಯಿತು. ಇಲ್ಲಿ ಮಂಗಳವಾರ ಮುಕ್ತಾಯವಾದ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಅಫ್ರಿಕಾ ತಂಡವು 198 ರನ್‌ಗಳಿಂದ ಜಯಿಸಿತು.

425 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ತಂಡವು 93.5 ಓವರ್‌ಗಳಲ್ಲಿ 227 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಕಗಿಸೊ ರಬಾಡ, ಮಾರ್ಕೊ ಜೆನ್ಸನ್ ಮತ್ತು ಸ್ಪಿನ್ನರ್ ಕೇಶವ್ ಮಹಾರಾಜ್ ತಲಾ ಮೂರು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 364, ನ್ಯೂಜಿಲೆಂಡ್; 293, ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ:354, ನ್ಯೂಜಿಲೆಂಡ್; 93.5 ಓವರ್‌ಗಳಲ್ಲಿ 227 (ಡೇವೊನ್ ಕಾನ್ವೆ 92, ಟಾಮ್ ಬ್ಲಂಡೆಲ್ 44, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 18, ಕಗಿಸೊ ರಬಾಡ 46ಕ್ಕೆ3, ಮಾರ್ಕೊ ಜೆನ್ಸನ್ 63ಕ್ಕೆ3, ಕೇಶವ್ ಮಹಾರಾಜ್ 75ಕ್ಕೆ3) ಫಲಿತಾಂಶ:ದಕ್ಷಿಣ ಆಫ್ರಿಕಾ ತಂಡಕ್ಕೆ 198 ರನ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.