ADVERTISEMENT

ವಿಶ್ವಕಪ್‌ನಿಂದ ಹೊರಬಿದ್ದ ಶ್ರೀಲಂಕಾ ನಾಯಕ ಶನಕ

ತೊಡೆಯ ಸ್ನಾಯು ನೋವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 16:21 IST
Last Updated 14 ಅಕ್ಟೋಬರ್ 2023, 16:21 IST
   

ಲಖನೌ (ಎಎಫ್‌ಪಿ): ಶ್ರೀಲಂಕಾ ನಾಯಕ ದಸುನ್ ಶನಕ ಅವರು ಗಾಯಾಳಾಗಿ ವಿಶ್ವಕಪ್‌ನಿಂದ ಹೊರಬಿದ್ದಿದದ್ದಾರೆ. ಚಮಿಕಾ ಕರುಣಾರತ್ನೆ ಅವರು ಬದಲಿಯಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ತಿಳಿಸಿದೆ.

ಮೂರು ದಿನಗಳ ಹಿಂದೆ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಅವರು ಬಲ ತೊಡೆಯ ಸ್ನಾಯು ನೋವಿಗೆ ಒಳಗಾಗಿದ್ದರು. ‘ಅವರಿಗೆ ಮೂರು ವಾರಗಳ ವಿಶ್ರಾಂತಿ ಬೇಕಾಗಲಿದೆ’ ಎಂದು ಹೇಳಿಕೆಯಲ್ಲಿ ಐಸಿಸಿ ತಿಳಿಸಿದೆ.

ಕರುಣಾರತ್ನೆ 23 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ADVERTISEMENT

ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ಮುಂದಿನ ಪಂದ್ಯವನ್ನು, ಸಮಾನದುಃಖಿ  ಆಸ್ಟ್ರೇಲಿಯಾ ವಿರುದ್ಧ ಲಖನೌದಲ್ಲಿ ಆಡಲಿದೆ. ಆಸ್ಟ್ರೇಲಿಯಾ ಕೂಡ ಮೊದಲ ಜಯಕ್ಕೆ ಹಾತೊರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.