ಢಾಕಾ: ವೇಗದ ಬೌಲರ್ ಅಷಿತ ಫರ್ನಾಂಡೊ (51ಕ್ಕೆ6) ಬೌಲಿಂಗ್ ನೆರವಿನಿಂದ ಶ್ರೀಲಂಕಾ ತಂಡವು ಶುಕ್ರವಾರ ಮುಕ್ತಾಯವಾದ ಎರಡನೇ ಟೆಸ್ಟ್ನಲ್ಲಿ ಬಾಂಗ್ಲಾದೇಶದ ಎದುರು 10 ವಿಕೆಟ್ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಗೆದ್ದಿತು.
ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆ ದಿನದಂದು ಆತಿಥೇಯ ತಂಡವು ಎರಡನೇ ಇನಿಂಗ್ಸ್ನಲ್ಲಿ 169 ರನ್ಗಳಿಗೆ ಆಲೌಟ್ ಆಯಿತು. 28 ರನ್ಗಳ ಸಣ್ಣ ಗುರಿ ನೀಡಿತು. ಲಂಕಾ ತಂಡವು ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾ: 116.2 ಓವರ್ಗಳಲ್ಲಿ 365, ಶ್ರೀಲಂಕಾ: 165.1 ಓವರ್ಗಳಲ್ಲಿ 506. ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 55.3 ಓವರ್ಗಳಲ್ಲಿ 169 (ಮುಷ್ಫೀಕರ್ ರಹೀಂ 23, ಲಿಟನ್ ದಾಸ್ 52, ಶಕೀಬ್ ಅಲ್ ಹಸನ್ 58, ರಜಿತಾ 40ಕ್ಕೆ2, ಅಶಿತ ಫರ್ನಾಂಡೊ 51ಕ್ಕೆ6) ಶ್ರೀಲಂಕಾ: 3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 29 (ಒಷಾಡ ಫರ್ನಾಂಡೊ ಔಟಾಗದೆ 21, ದಿಮುತ ಕರುಣರತ್ನೆ ಔಟಾಗದೆ 7) ಫಲಿತಾಂಶ:ಶ್ರೀಲಂಕಾ ತಂಡಕ್ಕೆ 10 ವಿಕೆಟ್ಗಳ ಜಯ ಮತ್ತು 1–0ಯಿಂದ ಸರಣಿ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.