
ಬಿ.ಟಿ.ರಾಮಯ್ಯ ಶೀಲ್ಡ್ ವಿಜೇತ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ (ಬೆಂಗಳೂರು ಪೂರ್ವ) ಶಾಲಾ ತಂಡ. (ಕುಳಿತವರು) ಎಡದಿಂದ; ಪಾರ್ಥ ಬಿ.ಎನ್, ತೇಜಸ್ವಿ ಶರ್ಮಾ (ನಾಯಕ), ಇ.ಅಶೋಕ್ (ಕೋಚ್), ಗೀತಾ ಜಿ. (ಉಪ ಪ್ರಾಂಶುಪಾಲರು), ರೇಷ್ಮಾ ಗಣೇಶ್ (ಪ್ರಾಂಶುಪಾಲರು), ಗಣೇಶ್ ಸುಂದರ್ (ಕ್ರೀಡಾ ನಿರ್ದೇಶಕರು), ದೀಪಾ ವಿ. (ಶೈಕ್ಷಣಿಕ ಮುಖ್ಯಸ್ಥರು),
ಬೆಂಗಳೂರು: ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ (ಬೆಂಗಳೂರು ಪೂರ್ವ) ಶಾಲಾ ತಂಡವು ಬಿ.ಟಿ. ರಾಮಯ್ಯ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ 16 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಯ (ಡಿವಿಷನ್–2) ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿದ್ಯಾರಣ್ಯಪುರದ ಬಿಇಎಲ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ, ಕೆ.ಸಾಯಿ ಶ್ರವಣ್ ರೆಡ್ಡಿ (37ಕ್ಕೆ4) ಹಾಗೂ ಅತೀಕ್ಷ್ ಸಿಂಗ್ (28ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ವಿದ್ಯಾಮಂದಿರ ತಂಡವು 13 ರನ್‌ಗಳಿಂದ ‘ದಿ ಸ್ಪೋರ್ಸ್ಟ್ ಸ್ಕೂಲ್’ ತಂಡವನ್ನು ಮಣಿಸಿತು.
ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ: 50 ಓವರ್‌ಗಳಲ್ಲಿ 175 (ಆರವ್ ಶ್ರೀವಾಸ್ತವ 27, ಪಾರ್ಥ ಬಿ.ಎನ್. 33; ಪಿ.ರುಷಿಕೇಶ್ 22ಕ್ಕೆ2, ಸಾಯಿ ಆರೂಷ್ ಎಸ್. 38ಕ್ಕೆ2).
ದಿ ಸ್ಪೋರ್ಸ್ಟ್ ಸ್ಕೂಲ್: 44.1 ಓವರ್‌ಗಳಲ್ಲಿ 162 (ಎಸ್.ಲಕ್ಷಿತ್ ಕುಮಾರ್ 60, ಎನ್.ಮಯೂರ್ 20; ಕೆ.ಸಾಯಿ ಶ್ರವಣ್ ರೆಡ್ಡಿ 37ಕ್ಕೆ4, ಅತೀಕ್ಷ್ ಸಿಂಗ್ 28ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.