ADVERTISEMENT

ಕ್ರಿಕೆಟ್: ಮೊದಲ ಟೆಸ್ಟ್ ಆರಂಭಕ್ಕೆ ಮಳೆ ಅಡ್ಡಿ

ಏಜೆನ್ಸೀಸ್
Published 8 ಜುಲೈ 2020, 11:30 IST
Last Updated 8 ಜುಲೈ 2020, 11:30 IST
ಸೌತಾಂಪ್ಟನ್‌ನ ರೋಸ್‌ ಬಾಲ್‌ನಲ್ಲಿ ಬುಧವಾರ ಆರಂಭವಾಗಬೇಕಿದ್ದ ವೆಸ್ಟ್ ಇಂಡೀಸ್ ಮತ್ತು  ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯಕ್ಕೆಊ ಮುನ್ನ ಮಳೆ ಸುರಿಯುತ್ತಿದೆ. ಅಂಪೈರ್‌ಗಳು ಪರಿಸ್ಥಿತಿಯ ಅವಲೋಕನ ನಡೆಸಿದರು –ರಾಯಿಟರ್ಸ್ ಚಿತ್ರ
ಸೌತಾಂಪ್ಟನ್‌ನ ರೋಸ್‌ ಬಾಲ್‌ನಲ್ಲಿ ಬುಧವಾರ ಆರಂಭವಾಗಬೇಕಿದ್ದ ವೆಸ್ಟ್ ಇಂಡೀಸ್ ಮತ್ತು  ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯಕ್ಕೆಊ ಮುನ್ನ ಮಳೆ ಸುರಿಯುತ್ತಿದೆ. ಅಂಪೈರ್‌ಗಳು ಪರಿಸ್ಥಿತಿಯ ಅವಲೋಕನ ನಡೆಸಿದರು –ರಾಯಿಟರ್ಸ್ ಚಿತ್ರ   

ಸೌತಾಂಪ್ಟನ್: ಕೊರೊನೋತ್ತರ ಕಾಲದ ಮೊದಲ ಕ್ರಿಕೆಟ್ ಟೆಸ್ಟ್‌ ಕಣ್ತುಂಬಿಕೊಳ್ಳಲು ಕಾತುರರಾಗಿರುವ ಅಭಿಮಾನಿಗಳ ಉತ್ಸಾಹಕ್ಕೆ ಮಳೆರಾಯ ತಣ್ಣೀರೆರಚಿದ್ದಾನೆ.

ಬುಧವಾರ ಏಜಿಸ್ ಬೌಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯವು ಮಳೆ ಬಂದ ಕಾರಣ ವಿಳಂಬವಾಗಿದೆ. ಸ್ಥಳೀಯ ವೇಳೆ 10.30 (ಭಾರತೀಯ ಕಾಲಮಾನ. ಮಧ್ಯಾಹ್ನ 3.30) ಔಟ್‌ಫೀಲ್ಡ್‌ನಲ್ಲಿ ಆಟಗಾರರು ವಾರ್ಮ್‌ ಅಪ್ ಮಾಡಿದರು. ಆದರೆ ಪಿಚ್ ಮೇಲಿನ ಹೊದಿಕೆಯನ್ನು ಸರಿಸಲಾಗಲಿಲ್ಲ. ಮೆಲ್ಲಗೆ ಮಳೆ ಸುರಿಯುತ್ತಿರುವುದರರಿಂದ ಪಂದ್ಯ ಆರಂಭವಾಗುವುದು ತಡವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT