
ಬೆಂಗಳೂರು: ಜೆಎಸ್‌ಸಿ ಬಾಲಕರ ಮತ್ತು ಬಾಲಕಿಯರ ತಂಡಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ 18 ವರ್ಷದೊಳಗಿನವರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಲೀಗ್ ಪ್ರವೇಶಿಸಿದವು.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಭೀರ್ (22) ಮತ್ತು ರೋಹಿತ್ (16) ಅವರ ಆಟದ ಬಲದಿಂದ ಜೆಎಸ್‌ಸಿ ಬಾಲಕರ ತಂಡವು 76–24ರಿಂದ ಸಾಯ್ ಧಾರವಾಡ ತಂಡವನ್ನು ಮಣಿಸಿತು. ಜೆಎಸ್‌ಸಿ ಬಾಲಕಿಯರ ತಂಡವು 68–54ರಿಂದ ರಾಜ್‌ಮಹಲ್ ಬಿ.ಸಿ ತಂಡವನ್ನು ಸೋಲಿಸಿತು. ಸಂಜನಾ (21), ಆಧ್ಯಾ (18) ಜೆಎಸ್‌ಸಿ ಪರ ಮಿಂಚಿದರು.
ಇತರ ಫಲಿತಾಂಶ: ಬಾಲಕರು: ಪಿಪಿಸಿ ತಂಡವು 63–46ರಿಂದ ಡಿವೈಇಎಸ್ ಬೆಂಗಳೂರು ತಂಡವನ್ನು; ಐಬಿಬಿಸಿ ತಂಡವು 46–39ರಿಂದ ಎಚ್‌ಬಿಆರ್ ಬಿ.ಸಿ ತಂಡವನ್ನು; ಬೀಗಲ್ಸ್ ಬಿ.ಸಿ ತಂಡವು 66–63ರಿಂದ ಎಂಎನ್‌ಕೆ ರಾವ್ ಪಾರ್ಕ್ ಬಿ.ಸಿ ತಂಡವನ್ನು ಮಣಿಸಿದವು.
ಬಾಲಕಿಯರು: ಡಿವೈಇಎಸ್ ಮೈಸೂರು ತಂಡವು 76–39ರಿಂದ ಯಂಗ್ ಓರಿಯನ್ಸ್ ಎಸ್.ಸಿ ವಿರುದ್ಧ; ಮೌಂಟ್ಸ್ ಕ್ಲಬ್ ತಂಡವು 60–34ರಿಂದ ಡಿವೈಇಎಸ್ ಮಂಡ್ಯ ವಿರುದ್ಧ; ಬೆಂಗಳೂರು ವ್ಯಾನ್‌ಗಾರ್ಡ್ಸ್ ತಂಡವು 50–14ರಿಂದ ಸದರ್ನ್ ಬ್ಲೂಸ್ ವಿರುದ್ಧ ಗೆಲುವು ಸಾಧಿಸಿದವರು.
ಸೆಮಿಫೈನಲ್ ಲೀಗ್ ಹಂತದ ಪಂದ್ಯಗಳು ಭಾನುವಾರ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.