ADVERTISEMENT

ವಿಶ್ವಕಪ್‌ ನಂತರ ಸ್ಟೇಯ್ನ್‌ ವಿದಾಯ?

ಪಿಟಿಐ
Published 26 ಜುಲೈ 2018, 16:49 IST
Last Updated 26 ಜುಲೈ 2018, 16:49 IST
ಡೇಲ್‌ ಸ್ಟೇಯ್ನ್‌
ಡೇಲ್‌ ಸ್ಟೇಯ್ನ್‌   

ಮುಂಬೈ: ಕಳೆದ ಕೆಲವು ವರ್ಷಗಳಿಂದ ಪದೇ ಪದೇ ಗಾಯಗೊಳಗಾಗುತ್ತಿರುವ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್‌ ಡೇಲ್‌ ಸ್ಟೇಯ್ನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಗುರುವಾರ ಇಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕಾದ ವೇಗಿ ‘ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ನಲ್ಲಿ ಆಡಲು ಪ್ರಯತ್ನಿಸುತ್ತೇನೆ. ಅದರ ನಂತರ ಏಕದಿನ ಪಂದ್ಯಗಳಲ್ಲಿ ಆಡುವುದು ಅನುಮಾನ. ಅಷ್ಟೊತ್ತಿಗೆ ನನಗೆ 40 ವರ್ಷ ವಯಸ್ಸಾಗಿರುತ್ತದೆ. ಆದರೆ, ಆ ನಂತರವೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಲಿದ್ದೇನೆ’ ಎಂದು ಹೇಳಿದ್ದಾರೆ.

‘2019ರ ವಿಶ್ವಕಪ್‌ ಆಡುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಸಿಗುವ ಭರವಸೆ ಇದೆ. ನನ್ನ ಸುಧೀರ್ಘ ಅನುಭವವು ಇದಕ್ಕೆ ನೆರವಾಗಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.