ADVERTISEMENT

ಮಿಂಚುವರೇ ಕ್ರಿಸ್‌ ಗೇಲ್, ರಸೆಲ್: ಚಾಂಪಿಯನ್ನರಿಗೆ ಇಂಗ್ಲೆಂಡ್ ಸವಾಲು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:18 IST
Last Updated 22 ಅಕ್ಟೋಬರ್ 2021, 19:18 IST
ಕೀರನ್ ಪೊಲಾರ್ಡ್
ಕೀರನ್ ಪೊಲಾರ್ಡ್   

ದುಬೈ (ಪಿಟಿಐ): ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಶನಿವಾರ ಆರಂಭವಾಗಲಿರುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವಾಡಲಿದೆ.

ಹಾಲಿ ಚಾಂಪಿಯನ್ ಕೂಡ ಆಗಿರುವ ವೆಸ್ಟ್ ಇಂಡೀಸ್ ತಂಡವನ್ನು ಈ ಬಾರಿ ಕೀರನ್ ಪೊಲಾರ್ಡ್ ಮುನ್ನಡೆಸುವರು. ದಿಗ್ಗಜ ಆಟಗಾರರಾದ ಕ್ರಿಸ್ ಗೇಲ್, ಡ್ವೇನ್ ಬ್ರಾವೊ ಮತ್ತು ಆ್ಯಂಡ್ರೆ ರಸೆಲ್ ತಂಡದಲ್ಲಿದ್ದಾರೆ.

ಆದರೆ ಐಪಿಎಲ್‌ನಲ್ಲಿ ಆಲ್‌ರೌಂಡರ್ ಬ್ರಾವೊ ಬಿಟ್ಟರೆ ಉಳಿದವರು ಫಾರ್ಮ್‌ನಲ್ಲಿರಲಿಲ್ಲ. ಕೆರೆಬಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಗೇಲ್ 9 ಇನಿಂಗ್ಸ್‌ಗಳಿಂದ ಕೇವಲ 165 ರನ್‌ಗಳನ್ನು ಮಾಡಿದ್ದರು.

ADVERTISEMENT

ಬೌಲಿಂಗ್ ವಿಭಾಗವೂ ಅಷ್ಟೇನೂ ಸಬಲವಾಗಿಲ್ಲ. 2016ರಲ್ಲಿ ಡ್ಯಾರೆನ್ ಸಾಮಿ ನೇತೃತ್ವದ ತಂಡವು ಪ್ರಶಸ್ತಿ ಗೆದ್ದಿತ್ತು. ಐಪಿಎಲ್‌ನ ಎರಡನೇ ಲೆಗ್‌ನಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಆಡಿದ್ದರು. ರಸೆಲ್ ಫಿಟ್ ಆಗಿರಲಿಲ್ಲ.

ವಿಂಡೀಸ್ ಬಳಗಕ್ಕೆ ಹೋಲಿಸಿದರೆ ಇಂಗ್ಲೆಂಡ್ ಬಲಿಷ್ಠವಾಗಿದೆ. ನಾಯಕ ಏಯಾನ್ ಮಾರ್ಗನ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಬೇಕು. ಆದರೆ, ಜಾನಿ ಬೆಸ್ಟೊ, ಮೋಯಿನ್ ಅಲಿ, ಜೊಸ್ ಬಟ್ಲರ್, ಲಿಯಾಮ್ ಲಿವಿಂಗ್‌ ಸ್ಟೋನ್, ಜೇಸನ್ ರಾಯ್ ಅವರು ರನ್‌ಗಳ ಹೊಳೆ ಹರಿಸಬಲ್ಲರು. ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್ ದಾಳಿ ರಂಗೇರಬಹುದು. ಆದರೆ, ಪ್ರಮುಖ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಅವರ ಅನುಪಸ್ಥಿತಿ ತಂಡವನ್ನು ಕಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.