ADVERTISEMENT

ವಿಜಯ್‌ ಮರ್ಚೆಂಟ್‌ ಟ್ರೋಫಿ: ಸುಕೃತ್‌, ಸುವಿಕ್‌ ದಾಳಿಗೆ ಕುಸಿದ ಉತ್ತರಾಖಂಡ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 23:10 IST
Last Updated 13 ಡಿಸೆಂಬರ್ 2025, 23:10 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಸ್ಪಿನ್ನರ್‌ಗಳಾದ ಲೆಗ್‌ ಸ್ಪಿನ್ನರ್ ಸುಕೃತ್ ಜೆ ಮತ್ತು ಎಡಗೈ ಸ್ಪಿನ್ನರ್ ಸುವಿಕ್‌ ಗಿಲ್‌ ಅವರು ತಲಾ ನಾಲ್ಕು ವಿಕೆಟ್‌ ಗಳಿಸುವುದರೊಂದಿಗೆ ಕರ್ನಾಟಕ ತಂಡ, ವಿಜಯ್‌ ಮರ್ಚೆಂಟ್‌ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿ ಎಲೀಟ್‌ ಗುಂಪಿನ  ಪಂದ್ಯದ ಎರಡನೇ ದಿನವಾದ ಶನಿವಾರ ಉತ್ತರಾಖಂಡ ವಿರುದ್ಧ ಮೇಲುಗೈ ಸಾಧಿಸಿತು.

ಛತ್ತೀಸಗಢದ ಭಿಲಾಯಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 9 ವಿಕೆಟ್‌ಗೆ 275 ರನ್ ಗಳಿಸಿದ್ದ ಕರ್ನಾಟಕ 287 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಉತ್ತರಾಖಂಡ 150 ರನ್‌ಗಳಿಗೆ ಆಲೌಟ್‌ ಆಯಿತು. ಆರಂಭ ಆಟಗಾರ ಅನನ್ಯ ನೇಗಿ (45, 58ಎ, 4x7) ಮತ್ತು ಸಿದ್ಧಾರ್ಥ ತೋಮಾರ್ (35, 88ಎ) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು. ಲೆಗ್‌ ಸ್ಪಿನ್ನರ್ ಸುಕೃತ್ 48 ರನ್ನಿಗೆ 4 ವಿಕೆಟ್ ಪಡೆದು ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಎಡಗೈ ಸ್ಪಿನ್ನರ್ ಗಿಲ್‌ (11ಕ್ಕೆ4) ಕೆಳ ಕ್ರಮಾಂಕದ ಆಟಗಾರರ ವಿಕೆಟ್‌ಗಳನ್ನು ಪಡೆದು ಕರ್ನಾಟಕ 137 ರನ್‌ಗಳ ಮುನ್ನಡೆ ಪಡೆಯಲು ನೆರವಾದರು.

ADVERTISEMENT

ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 22 ಓವರುಗಳಲ್ಲಿ 1 ವಿಕೆಟ್‌ಗೆ 83 ರನ್ ಗಳಿಸಿದ್ದು ಒಟ್ಟಾರೆ ಮುನ್ನಡೆಯನ್ನು 220 ರನ್‌ಗಳಿಗೆ ಹೆಚ್ಚಿಸಿದೆ. ರೋಹಿತ್ (ಅಜೇಯ 43, 68ಎ, 4x5) ಮತ್ತು ಅರುಷ್ ಜೈನ್ (ಔಟಾಗದೇ 37, 60ಎ) ಮುರಿಯದ ಎರಡನೇ ವಿಕೆಟ್‌ಗೆ 82 ರನ್ ಸೇರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 95 ಓವರುಗಳಲ್ಲಿ 287 (ಆರುಷ್‌ ಜೈನ್ 135, ಸುಕೃತ್‌ ಜೆ. 39, ಅಭಿಮನ್ಯ 91ಕ್ಕೆ5, ಆರವ್ ಗುಪ್ತಾ 63ಕ್ಕೆ2, ಶೌರ್ಯ ಎಂ. 32ಕ್ಕೆ2) ಮತ್ತು 22 ಓವರುಗಳಲ್ಲಿ 1 ವಿಕೆಟ್‌ಗೆ 83 (ರೋಹಿತ್ ಎಂ. ಔಟಾಗದೇ 43, ಆರುಷ್‌ ಜೈನ್ ಔಟಾಗದೇ 37); ಉತ್ತರಾಖಂಡ: 59.4 ಓವರುಗಳಲ್ಲಿ 150 (ಅನಯ ನೇಗಿ 45, ಸಿದ್ಧಾರ್ಥ ತೋಮಾರ್ 35, ರಾಕೇಶ್‌ 26; ಸುಕೃತ್ ಜೆ. 48ಕ್ಕೆ4, ಸುವಿಕ್ ಗಿಲ್ 11ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.