ADVERTISEMENT

R. Ashwin | ಸರಣಿ ಮಧ್ಯೆ ಅಶ್ವಿನ್ ನಿವೃತ್ತಿ: ಸುನಿಲ್ ಗವಾಸ್ಕರ್ ಅಸಮಾಧಾನ

ಪಿಟಿಐ
Published 18 ಡಿಸೆಂಬರ್ 2024, 10:39 IST
Last Updated 18 ಡಿಸೆಂಬರ್ 2024, 10:39 IST
<div class="paragraphs"><p>ಆರ್.  ಅಶ್ವಿನ್ ಮತ್ತು ಸುನಿಲ್ ಗವಾಸ್ಕರ್ </p></div>

ಆರ್. ಅಶ್ವಿನ್ ಮತ್ತು ಸುನಿಲ್ ಗವಾಸ್ಕರ್

   

– ಪಿಟಿಐ ಚಿತ್ರಗಳು

ಬ್ರಿಸ್ಬೇನ್: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸಮಯದ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಸದ್ಯ ಸಾಗುತ್ತಿರುವ ಆಸ್ಪ್ರೇಲಿಯಾ ವಿರುದ್ಧ ಸರಣಿ ಬಳಿಕ ಅವರು ನಿವೃತ್ತಿ ಹೇಳಬಹುದಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ನಿವೃತ್ತಿಯಿಂದಾಗಿ ಸರಣಿಯಲ್ಲಿ ಉಳಿದಿರುವ ಎರಡು ಟೆಸ್ಟ್ ಪಂದ್ಯಗಳಿಗೆ ಓರ್ವ ಸ್ಪಿನ್ನರ್‌ನ ಕೊರತೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯವಾದ ಬೆನ್ನಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ, ಅಶ್ವಿನ್ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದರು.

‘ಈ ಸರಣಿಯ ಬಳಿಕ ನಾನು ಭಾರತ ತಂಡದ ಆಯ್ಕೆಗೆ ಲಭ್ಯವಿಲ್ಲ ಎಂದು ಹೇಳಬಹುದಿತ್ತು. ಇದು 2014–15ರಲ್ಲಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಬಳಿಕ ಎಂ.ಎಸ್ ಧೋನಿ ನಿವೃತ್ತಿ ಘೋಷಿಸಿದ ಹಾಗೆ ಆಯಿತು’ ಎಂದು ಹೇಳಿದ್ದಾರೆ.

‘ಒಂದು ಉದ್ದೇಶದೊಂದಿಗೆ ಆಯ್ಕೆ ಸಮಿತಿ ಈ ಪ್ರವಾಸಕ್ಕೆ ಹಲವು ಆಟಗಾರರನ್ನು ಆಯ್ಕೆ ಮಾಡಿದೆ. ಒಂದು ವೇಳೆ ಅವರು ಗಾಯಗೊಂಡರೆ, ತಂಡದಲ್ಲಿರುವ ಮೀಸಲು ಆಟಗಾರರನ್ನು ಆಡಿಸಬಹುದು. ಸಾಮಾನ್ಯವಾಗಿ ಸರಣಿಯ ಕೊನೆಯಲ್ಲಿ ನಿವೃತ್ತಿ ಘೋಷಿಸುತ್ತಾರೆ. ಆದರೆ ಸರಣಿಯ ಮಧ್ಯದಲ್ಲಿ ವಿದಾಯ ಹೇಳುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಸರಣಿಯ ಕೊನೆ ಟೆಸ್ಟ್‌ ಪಂದ್ಯ ನಡೆಯುವ ಸಿಡ್ನಿ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಆ ಪಂದ್ಯದಲ್ಲಿ ಭಾರತ ಎರಡು ಸ್ಪಿನ್ನರ್‌ಗಳೊಂದಿಗೆ ಆಡಬಹುದಿತ್ತು. ಆ ವೇಳೆ ಅವರು ತಂಡದ ಆಡುವ ಬಳಗದಲ್ಲಿ ಇರುತ್ತಿದ್ದರು ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.