ADVERTISEMENT

ಮ್ಯಾಚ್ ಫಿಕ್ಸಿಂಗ್ ಯತ್ನ: ಸನ್ನಿ ಧಿಲ್ಲೋನ್‌ಗೆ 6 ವರ್ಷ ನಿಷೇಧ ಹೇರಿದ ಐಸಿಸಿ

ಪಿಟಿಐ
Published 10 ಡಿಸೆಂಬರ್ 2024, 10:03 IST
Last Updated 10 ಡಿಸೆಂಬರ್ 2024, 10:03 IST
<div class="paragraphs"><p>ಐಸಿಸಿ</p></div>

ಐಸಿಸಿ

   

ದುಬೈ: ಅಬುಧಾಬಿ ಟಿ10 ಲೀಗ್ ಫ್ರಾಂಚೈಸಿಯ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸನ್ನಿ ಧಿಲ್ಲೋನ್ ಅವರನ್ನು ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಆರೋಪದಡಿ 6 ವರ್ಷಗಳ ಕಾಲ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಿ ಐಸಿಸಿ ಆದೇಶ ಹೊರಡಿಸಿದೆ.

ಕಳೆದ ವರ್ಷ ಧಿಲ್ಲೋನ್ ವಿರುದ್ಧ ಆರೋಪ ಕೇಳಿಬಂದಿತ್ತು. ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು. 2023ರ ಸೆಪ್ಟೆಂಬರ್ 13ರಿಂದ ನಿಷೇಧ ಪೂರ್ವಾನ್ವಯವಾಗಿದೆ.

ADVERTISEMENT

‘ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ(ಇಸಿಬಿ) ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಸನ್ನಿ ಧಿಲ್ಲೋನ್ ಉಲ್ಲಂಘಿಸಿರುವುದು ಕಂಡುಬಂದಿದೆ. ಹೀಗಾಗಿ, ಎಲ್ಲ ಮಾದರಿಯ ಕ್ರಿಕೆಟ್‌ನಿಂದ 6 ವರ್ಷಗಳ ಕಾಲ ನಿಷೇಧ ಹೇರಲಾಗಿದೆ’ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

2021ರ ಅಬುಧಾಬಿ ಟಿ10 ಕ್ರಿಕೆಟ್ ಲೀಗ್‌ಗೆ ಸಂಬಂಧಿಸಿದ ಆರೋಪ ಇದಾಗಿದೆ. ಧಿಲ್ಲೋನ್ ಸೇರಿ 8 ಮಂದಿ ವಿರುದ್ಧ ಸರಣಿ ವೇಳೆ ಪಂದ್ಯಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರಲು ಯತ್ನಿಸಿದ ಆರೋಪ ಹೊರಿಸಲಾಗಿತ್ತು.

ಇದೇ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಪರಾಗ್ ಸಾಂಘ್ವಿ ಮತ್ತು ಕೃಷ್ಣನ್ ಕುಮಾರ್ ಚೌಧರಿ ವಿರುದ್ಧ ಭ್ರಷ್ಟಾಚಾರದ ವಿಭಿನ್ನ ಸಂಹಿತೆ ಅಡಿ ಆರೋಪ ಹೊರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.