ADVERTISEMENT

T20 ವಿಶ್ವಕಪ್‌– ಸೂಪರ್ ಎಂಟು: ಭಾರತಕ್ಕೆ ಕಠಿಣ ಸವಾಲುಗಳುಂಟು!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 15:57 IST
Last Updated 21 ಫೆಬ್ರುವರಿ 2026, 15:57 IST

ಅಹಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ (ಫೆ.22) ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪರ್ 8ರ ಹಣಾಹಣಿ ಕುತೂಹಲ ಕೆರಳಿಸಿದೆ. ಇದು ಹಾಲಿ ಚಾಂಪಿಯನ್ ಭಾರತಕ್ಕೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗ ನಿಜವಾದ ಪರೀಕ್ಷೆಯನ್ನು ಒಡ್ಡಲಿದೆ. ಗುಂಪು ಹಂತದಲ್ಲಿ ಅಮೆರಿಕ, ಪಾಕಿಸ್ತಾನ, ನಮಿಬಿಯಾ ಮತ್ತು ನೆದರ್ಲೆಂಡ್ಸ್ ಎದುರಿನ ಪಂದ್ಯಗಳಲ್ಲಿ ಮಾಡಿದ ಲೋಪಗಳನ್ನು ತಿದ್ದಿಕೊಂಡು ಕಣಕ್ಕಿಳಿಯಬೇಕಾದ ಸವಾಲು ತಂಡಕ್ಕೆ ಇದೆ. ಒಂದೇ ಒಂದು ಸಣ್ಣ ತಪ್ಪು ಕೂಡ ಗೆಲುವಿನ ಅವಕಾಶ ಕಿತ್ತುಕೊಳ್ಳಬಹುದು. ಸೆಮಿಫೈನಲ್ ಹಾದಿಯೂ ಕಠಿಣವಾಗಬಹುದು. ಆದ್ದರಿಂದ ಪ್ರತಿಯೊಂದು ಹಂತದಲ್ಲಿಯೂ ಪೂರ್ಣಪ್ರಮಾಣದ ಸಾಮರ್ಥ್ಯ ಪಣಕ್ಕೊಡ್ಡಬೇಕಿದೆ. ಏಕೆಂದರೆ; 2024ರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು ಸೋತಿದ್ದ ಸೇಡು ತೀರಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಸಿದ್ಧವಾಗಿದೆ. ಈ ಕುರಿತು ಕ್ರಿಕೆಟ್ ಕಾಮೆಂಟೆಟರ್ ಚಂದ್ರಮೌಳಿ ಕಣವಿ ಮಾತನಾಡಿದ್ದಾರೆ…

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.