ADVERTISEMENT

ಟಿ20 ಕ್ರಿಕೆಟ್‌ | ವೃಂದಾ ದಿನೇಶ್‌ ಅಜೇಯ ಶತಕ: ಕರ್ನಾಟಕಕ್ಕೆ ಸುಲಭ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 19:10 IST
Last Updated 13 ಅಕ್ಟೋಬರ್ 2025, 19:10 IST
<div class="paragraphs"><p>ಟಿ20 ಕ್ರಿಕೆಟ್‌</p></div>

ಟಿ20 ಕ್ರಿಕೆಟ್‌

   

ಬೆಂಗಳೂರು: ವೃಂದಾ ದಿನೇಶ್‌ (ಔಟಾಗದೇ 118;58ಎ) ಅವರ ಅಮೋಘ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್‌ ಮಹಿಳೆಯರ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸೋಮವಾರ 65 ರನ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು. 

ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 187 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಹರಿಯಾಣ ತಂಡ 8 ವಿಕೆಟ್‌ಗೆ 123 ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 187 (ಶಿಶಿರಾ ಎ ಗೌಡ 20, ವೃಂದಾ ದಿನೇಶ್‌ ಔಟಾಗದೇ 118, ನಿಕಿ ಪ್ರಸಾದ್ 34). ಹರಿಯಾಣ: 20 ಓವರ್‌ಗಳಲ್ಲಿ 8 123 (ದೀಯಾ ಯಾದವ್ 60; ರಾಜೇಶ್ವರಿ ಗಾಯಕವಾಡ್‌ 23ಕ್ಕೆ 3, ಸಹನಾ ಎಸ್‌. ಪವಾರ್‌ 26ಕ್ಕೆ 3). ಫಲಿತಾಂಶ: ಕರ್ನಾಟಕಕ್ಕೆ 65 ರನ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.