ಬ್ರಿಜ್‌ಟೌನ್, ಬಾರ್ಬಡೊಸ್: ಟಿ20 ಕ್ರಿಕೆಟ್‌ನಲ್ಲಿ ಅಕೀಬ್ ಅಲಿಯಾಸ್ ನಾಯಕತ್ವದ ಒಮಾನ್ ತಂಡವು ಸೋಮವಾರ ನಡೆಯಲಿರುವ ಬಿ ಗುಂಪಿನ ಪಂದ್ಯದಲ್ಲಿ ಗೆರಾರ್ಡ್ ಎರಸ್ಮಸ್ ನಾಯಕತ್ವದ ನಮಿಬಿಯಾವನ್ನು ಎದುರಿಸಲಿದೆ.
ಒಮಾನ್ ತಂಡಕ್ಕೆ ಇದು ಮೂರನೇ ವಿಶ್ವಕಪ್ ಟೂರ್ನಿಯಾಗಿದೆ. ನಮಿಬಿಯಾ ತಂಡವು ಆಫ್ರಿಕನ್ ವಿಭಾಗದ ಕ್ವಾಲಿಫೈಯರ್‌ನಲ್ಲಿ ಅರ್ಹತೆ ಪಡೆದು ಮುಖ್ಯ ಸುತ್ತು ಪ್ರವೇಶಿಸಿದೆ.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳು 6 ಸಲ ಮುಖಾಮುಖಿಯಾಗಿವೆ. ನಮಿಬಿಯಾ 4 ಹಾಗೂ ಒಮಾನ್ 2 ಸಲ ಜಯಿಸಿವೆ.
ಪಂದ್ಯ ಆರಂಭ: ಬೆಳಿಗ್ಗೆ 6, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.