ADVERTISEMENT

ಟಿ20 ವಿಶ್ವಕಪ್‌: 6 ಪಿಚ್‌ಗಳು ‘ತೃಪ್ತಿಕರ’

ಪಿಟಿಐ
Published 21 ಆಗಸ್ಟ್ 2024, 13:43 IST
Last Updated 21 ಆಗಸ್ಟ್ 2024, 13:43 IST
<div class="paragraphs"><p>ಕ್ರಿಕೆಟ್ (ಸಾಂಕೇತಿಕ ಚಿತ್ರ)</p></div>

ಕ್ರಿಕೆಟ್ (ಸಾಂಕೇತಿಕ ಚಿತ್ರ)

   

ದುಬೈ: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಯಾರ್ಕ್‌ ಲೆಗ್‌ನಲ್ಲಿ ಬಳಸಲಾದ ಎಂಟು ಪಿಚ್‌ಗಳ ಪೈಕಿ ಆರು ಪಿಚ್‌ಗಳಿಗೆ ಐಸಿಸಿ ‘ತೃಪ್ತಿದಾಯಕ’ ರೇಟಿಂಗ್‌ ನೀಡಿದೆ.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ
ಅತಿಥ್ಯದಲ್ಲಿ ನಡೆದಿತ್ತು. ಟೂರ್ನಿಯಲ್ಲಿ ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡ ಚಾಂಪಿಯನ್‌ ಆಗಿತ್ತು.

ADVERTISEMENT

ಟೂರ್ನಿಯ ಡ್ರಾಪ್‌ ಇನ್‌ ಪಿಚ್‌ಗಳ ಕಳಪೆ ಗುಣಮಟ್ಟದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಐಸಿಸಿಯು ಪಿಚ್‌ಗಳ ವರದಿಯನ್ನು ಬಿಡುಗಡೆ ಮಾಡಿದೆ.

ಐರ್ಲೆಂಡ್ ವಿರುದ್ಧದ ಭಾರತದ ಆರಂಭಿಕ ಪಂದ್ಯವನ್ನು ಒಳಗೊಂಡಂತೆ ನ್ಯೂಯಾರ್ಕ್‌ನ ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಎರಡು ಪಂದ್ಯಗಳ ಪಿಚ್‌ಗಳಿಗೆ ‘ಅತೃಪ್ತಿಕರ’ ರೇಟಿಂಗ್ ನೀಡಲಾಗಿದೆ. ಮತ್ತೊಂದು ಪಂದ್ಯ ಶ್ರೀಲಂಕಾ – ದಕ್ಷಿಣ ಆಫ್ರಿಕಾ ನಡುವೆ ನಡೆದಿತ್ತು.

ಎಲ್ಲಾ 52 ಪೂರ್ಣಗೊಂಡ ಪಂದ್ಯಗಳನ್ನು ಒಳಗೊಂಡಿರುವ ವರದಿಯಲ್ಲಿ ಮೂರು ಪಿಚ್‌ಗಳಲ್ಲಿ ಅಮೆರಿಕದ ಎರಡು ಮತ್ತು ವೆಸ್ಟ್ ಇಂಡೀಸ್‌ನ ಒಂದನ್ನು ‘ಅತೃಪ್ತಿಕರ’ ಎಂದು ಪರಿಗಣಿಸಲಾಗಿದೆ. ಉಳಿದ ಹೆಚ್ಚಿನವು ‘ತೃಪ್ತಿದಾಯಕ’ ಅಥವಾ ಹೆಚ್ಚಿನ ರೇಟಿಂಗ್‌ಗಳನ್ನು ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.