ADVERTISEMENT

IND vs ENG| ಭಾರತ–ಇಂಗ್ಲೆಂಡ್‌ ನಡುವಿನ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ: ಏನದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜುಲೈ 2022, 5:30 IST
Last Updated 4 ಜುಲೈ 2022, 5:30 IST
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ   

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್‌ ವಿರುದ್ಧ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಅವರು ಅರ್ಧಶತಕ ಗಳಿಸಿದರು. ಈ ಮೂಲಕ ಅವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಎಜ್‌ಬಾಸ್ಟನ್‌ ಅಂಗಳದಲ್ಲಿ 36 ವರ್ಷಗಳ ಬಳಿಕ ಭಾರತದ ಆರಂಭಿಕರೊಬ್ಬರು ಗಳಿಸಿದ ಮೊದಲ ಟೆಸ್ಟ್‌ ಅರ್ಧಶತಕ ಇದಾಗಿದೆ.

ಇದಕ್ಕೂ ಮೊದಲು, ಸುನಿಲ್ ಗವಾಸ್ಕರ್ ಅವರು 1986 ರಲ್ಲಿ ಎಜ್‌ಬಾಸ್ಟನ್‌ನಲ್ಲಿ ಟೆಸ್ಟ್ ಅರ್ಧಶತಕ ಸಿಡಿಸಿದ್ದರು. ಅವರೇ ಕೊನೆ. ಅಲ್ಲಿಂದೀಚೆಗೆ ಯಾವೊಬ್ಬ ಓಪನರ್‌ ಕೂಡ ಈ ಅಂಗಳದಲ್ಲಿ ಅರ್ಧಶತಕ ಗಳಿಸಿರಲಿಲ್ಲ.

ADVERTISEMENT

ಈ ಮಧ್ಯೆ, 2011ರಲ್ಲಿ ಗೌತಮ್‌ ಗಂಭೀರ್‌ ಅವರು 38(64) ಗಳಿಸಿದ್ದೇ ಭಾರತದ ಓಪನರ್‌ಗಳ ಈ ವರೆಗಿನ ಅತ್ಯಧಿಕ ಸ್ಕೋರ್‌ ಆಗಿತ್ತು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.