ADVERTISEMENT

ಪರಿಸ್ಥಿತಿಗೆ ಬಿಸಿಸಿಐ ಹೊಣೆ: ಸಚಿನ್ ತೆಂಡೂಲ್ಕರ್‌

ಹಿತಾಸಕ್ತಿ ಸಂಘರ್ಷ ಆರೋಪ

ಪಿಟಿಐ
Published 5 ಮೇ 2019, 17:23 IST
Last Updated 5 ಮೇ 2019, 17:23 IST
ಸಚಿನ್‌ ತೆಂಡೂಲ್ಕರ್‌
ಸಚಿನ್‌ ತೆಂಡೂಲ್ಕರ್‌   

ನವದೆಹಲಿ: ಹಿತಾಸಕ್ತಿ ಸಂಘ ರ್ಷದ ಆರೋಪ ಎದುರಿಸುತ್ತಿರುವ ಸಚಿನ್‌ ತೆಂಡೂಲ್ಕರ್‌ ಅವರು ಪ್ರಸ್ತುತ ಸನ್ನಿವೇಶ ಸೃಷ್ಟಿಯಾಗಲು ಬಿಸಿಸಿಐ ಕಾರಣ ಎಂದು ಹೇಳಿದ್ದಾರೆ.

ಸಂಘರ್ಷದ ಕುರಿತು 13 ಅಂಶಗಳ ವಿವರಣೆಯನ್ನು ಬಿಸಿಸಿಐ ಒಂಬುಡ್ಸ್‌ ಮನ್‌ ಡಿ.ಕೆ.ಜೈನ್‌ ಅವರಿಗೆ ನೀಡಿದ್ದಾರೆ.

ಜೈನ್‌ ಅವರು ಆಡಳಿತಾಧಿಕಾರಿಗಳ ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌ ಮತ್ತು ಸಿಇಒ ರಾಹುಲ್‌ ಜೋಹ್ರಿ ಅವರಿಗೆ ಸಚಿನ್‌ ಹುದ್ದೆಯನ್ನು ಪರಿಶೀಲಿಸುವಂತೆ ಆದೇಶ ಹೊರಡಿಸಿದ್ದರು. ಜೋಹ್ರಿ ಅವರುನಿಯಮಾವಳಿ 38(3ಎ) ಅನು ಸಾರ ವಿಚಾರಣೆ ನಡೆಸಲು ಬಯಸಿದ್ದರು. ಆದರೆ, ಸಚಿನ್‌ ಹಿತಾಸಕ್ತಿ ಸಂಘರ್ಷ ಕುರಿತು ಪರಿಶೀಲಿಸುವ ಅಗತ್ಯ ಇಲ್ಲ. ಸದ್ಯದ ಪರಿಸ್ಥಿತಿಗೆ ಬಿಸಿಸಿಐ ಕಾರಣ ಎಂದು ಉತ್ತರಿಸಿದ್ದಾರೆ.

ADVERTISEMENT

‘2015ರಲ್ಲಿ ಬಿಸಿಸಿಐ ಸಲಹಾ ಸಮಿತಿಗೆ ನೇಮಕಗೊಳ್ಳುವ ಮೊದಲು ಮುಂಬೈ ಇಂಡಿಯನ್ಸ್‌ ತಂಡದ ಐಕಾನ್‌ ಆಗಿದ್ದೆ, 2013ರಲ್ಲಿ ಮುಂಬೈ ಇಂಡಿಯನ್ಸ್ ನನ್ನ ನಿವೃತ್ತಿಯ ನಂತರ ಐಕಾನ್‌ ಎಂದು ಘೋಷಿಸಿತ್ತು.ಇದರ ಕುರಿತು ಸಲಹಾ ಸಮಿತಿಗೆ ಸೇರುವ ಮುನ್ನ ವಿವರಿಸಿದ್ದೆ. ಅಲ್ಲದೆ, ಸಲಹಾ ಸಮಿತಿಯಲ್ಲಿ ನನ್ನ ಸ್ಥಾನ ಮತ್ತು ಕಾರ್ಯ ನಿರ್ವಹಣೆ ಕುರಿತು ಬಿಸಿಸಿಐ ಬಳಿ ವಿವರಣೆ ಕೋರಿ ಪತ್ರ ಬರೆದಿದ್ದೆ. ಇದುವರೆಗೂ ಉತ್ತರ ಬಂದಿಲ್ಲ ಎಂದು ದೂರಿದ್ದಾರೆ.

ಸಚಿನ್‌ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ‘ಐಕಾನ್‌’ ಆಗಿದ್ದು, ಈ ಕುರಿತು ವಿವರಣೆ ನೀಡುವಂತೆಬಿಸಿಸಿಐ ಮೌಲ್ಯ ಅಧಿಕಾರಿ ಡಿ.ಕೆ.ಜೈನ್‌ ಅವರು ಸಚಿನ್‌ ಅವರಿಗೆ ಆದೇಶ ಹೊರಡಿಸಿದ್ದರು. ಈ ವೇಳೆ ಬಿಸಿಸಿಐ, ನಿಯಮಾವಳಿ 38 (3ಎ) ಅಡಿಯಲ್ಲಿ ವಿವಾದವನ್ನು ಬಗೆಹರಿಸಬಹುದು ಎಂದು ಒಂಬುಡ್ಸ್‌ ಮನ್ಜೈನ್‌ ಅವರಿಗೆ ವಿವರಿಸಿತ್ತು. ಸೌರವ್‌ ಗಂಗೂಲಿ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರಂತೆಯೇ ಎರಡು ಜವಾಬ್ದಾರಿ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.