ADVERTISEMENT

ಟೆಸ್ಟ್‌ ರ‍್ಯಾಂಕಿಂಗ್: ಎರಡನೇ ಸ್ಥಾನಕ್ಕೆ ಏರಿದ ಭಾರತ

ಪಿಟಿಐ
Published 6 ಫೆಬ್ರುವರಿ 2024, 4:39 IST
Last Updated 6 ಫೆಬ್ರುವರಿ 2024, 4:39 IST
ಕ್ರಿಕೆಟ್‌
ಕ್ರಿಕೆಟ್‌   

ದುಬೈ: ಇಂಗ್ಲೆಂಡ್ ಮೇಲೆ ಸೋಮವಾರ ಸಾಧಿಸಿದ ಗೆಲುವಿನೊಡನೆ ಭಾರತ ತಂಡ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ಸ್‌ ಕ್ರಮಾಂಕಪಟ್ಟಿಯಲ್ಲಿ (2023–25) ನಾಲ್ಕು ಸ್ಥಾನ ಬಡ್ತಿ ಪಡೆದಿದ್ದು, ಎರಡನೇ ಸ್ಥಾನಕ್ಕೆ ಜಿಗಿದಿದೆ.

ಮೊದಲ ಟೆಸ್ಟ್‌ನಲ್ಲಿ ಅನುಭವಿಸಿದ ಸೋಲಿನಿಂದ ಭಾರತ ಈ ಹಿಂದಿನ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಸರಿದಿತ್ತು. ಎರಡನೆ ಟೆಸ್ಟ್‌ ಗೆಲುವಿನ ನಂತರ ಭಾರತ 52.77 ಪರ್ಸೆಂಟೇಜ್ ಪಾಯಿಂಟ್ಸ್ ಪಡೆದಿದ್ದು, ಆಸ್ಟ್ರೇಲಿಯಾ ನಂತರ (55.00) ಎರಡನೇ ಸ್ಥಾನದಲ್ಲಿದೆ.

ಕ್ರಮಾಂಕಪಟ್ಟಿಯ ಮೇಲಿನ ಅರ್ಧದಲ್ಲಿರುವ ತಂಡಗಳ ನಡುವೆ ಪೈಪೋಟಿ ತೀವ್ರವಾಗಿದ್ದು ತಂಡಗಳ ಅಂತರ ಶೇ 5ಕ್ಕಿಂತ ಕಡಿಮೆಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.