ADVERTISEMENT

ಕೆಎಸ್‌ಸಿಎ ಕಾರ್ಯದರ್ಶಿಗಳ ತಂಡಕ್ಕೆ ಜಯ

ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ; ಮಿಂಚಿದ ನವೀನ್, ಕುಶಾಲ್; ಕರಣ್ ಶತಕ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 16:20 IST
Last Updated 26 ಜುಲೈ 2018, 16:20 IST
ಬೆಂಗಳೂರಿನ ಆರ್‌ಎಸ್‌ಐ ಮೈದಾನದಲ್ಲಿ ಗುರುವಾರ ನಡೆದ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ರೈಲ್ವೆ ಕ್ರೀಡಾಭಿವೃದ್ಧಿ ಮಂಡಳಿ ತಂಡದ ವಿರುದ್ಧ ಗೆದ್ದ ಕರ್ನಾಟಕ ತಂಡದ ಶಿವಂ, ಕೆ.ಎನ್. ಭರತ್, ಕುಶಾಲ್, ಶರಣ್ ಗೌಡ, ಎಂ.ಜಿ. ನವೀನ್, ಮಿತ್ರಕಾಂತ್ ಯಾದವ್ ಅವರು ಸಂಭ್ರಮಿಸಿದರು  ಪ್ರಜಾವಾಣಿ ಚಿತ್ರ
ಬೆಂಗಳೂರಿನ ಆರ್‌ಎಸ್‌ಐ ಮೈದಾನದಲ್ಲಿ ಗುರುವಾರ ನಡೆದ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ರೈಲ್ವೆ ಕ್ರೀಡಾಭಿವೃದ್ಧಿ ಮಂಡಳಿ ತಂಡದ ವಿರುದ್ಧ ಗೆದ್ದ ಕರ್ನಾಟಕ ತಂಡದ ಶಿವಂ, ಕೆ.ಎನ್. ಭರತ್, ಕುಶಾಲ್, ಶರಣ್ ಗೌಡ, ಎಂ.ಜಿ. ನವೀನ್, ಮಿತ್ರಕಾಂತ್ ಯಾದವ್ ಅವರು ಸಂಭ್ರಮಿಸಿದರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ರೈಲ್ವೆ ಕ್ರೀಡಾಭಿವೃದ್ಧಿ ಮಂಡಳಿ ತಂಡದ ಕರಣ್ ಶರ್ಮಾ ಮತ್ತು ಅನುರೀತ್ ಸಿಂಗ್ ಅವರು ಹತ್ತನೇ ವಿಕೆಟ್‌ ಜೊತೆಯಾಟದಲ್ಲಿ ಮಾಡಿದ ಹೋರಾಟಕ್ಕೆ ಫಲ ಸಿಗಲಿಲ್ಲ. ಕೆಎಸ್‌ಸಿಎ ಕಾರ್ಯದರ್ಶಿಗಳ ತಂಡದ ಬೌಲರ್‌ಗಳ ಆಟಕ್ಕೆ 79 ರನ್‌ಗಳ ಜಯ ಒಲಿಯಿತು.

‘ಸಿ’ ಗುಂಪಿನ ಎರಡನೇ ಪಂದ್ಯದಲ್ಲಿ ನಾಗಭರತ ನಾಯಕತ್ವದ ತಂಡವು ರೈಲ್ವೆ ತಂಡಕ್ಕೆ 356 ರನ್‌ಗಳ ಗುರಿ ನೀಡಿತ್ತು. ಆದರೆ ತಂಡವು 56.3 ಓವರ್‌ಗಳಲ್ಲಿ 277 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಕರಣ್ ಶರ್ಮಾ (127; 144ಎ, 12ಬೌಂ, 7ಸಿ) ಮತ್ತು ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್ ಅನುರೀತ್ ಸಿಂಗ್ (53; 57ಎ, 4ಬೌಂ, 4ಎ) ಅವರು ಹತ್ತನೇ ವಿಕೆಟ್‌ಗೆ 99 ರನ್‌ ಸೇರಿಸಿದರು. ತಲಾ ನಾಲ್ಕು ವಿಕೆಟ್ ಕಬಳಿಸಿದ ಎಂ.ಜಿ. ನವೀನ್ ಮತ್ತು ಕುಶಾಲ್ ವಾಧ್ವಾನಿ ಮಿಂಚಿದರು.

ರಾಜೇಂದ್ರಸಿಂಹಜೀ ಸಂಸ್ಥೆ (ಆರ್‌ಎಸ್‌ಐ) ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೈಲ್ವೆ ತಂಡದ ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ನಿರ್ಗಮಿಸಿದರು. ಇದರಿಂದಾಗಿ ತಂಡವು ಸೋಲಿನ ಹಾದಿ ಹಿಡಿಯಿತು. ಐಎಎಫ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕೆಎಸ್‌ಸಿಎ ಇಲೆವನ್ ತಂಡ ಛತ್ತೀಸ್‌ಗಡ ಕ್ರಿಕೆಟ್ ಸಂಸ್ಥೆಗೆ 4 ವಿಕೆಟ್‌ಗಳಿಂದ ಮಣಿಯಿತು.

ADVERTISEMENT

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್‌

ರೈಲ್ವೆ ಕ್ರೀಡಾಭಿವೃದ್ಧಿ ಮಂಡಳಿ: 31.2 ಓವರ್‌ಗಳಲ್ಲಿ 104

ಕೆಎಸ್‌ಸಿಎ ಕಾರ್ಯದರ್ಶಿಗಳ ಇಲೆವನ್: 141.5 ಓವರ್‌ಗಳಲ್ಲಿ 460;

ಎರಡನೇ ಇನಿಂಗ್ಸ್‌

ರೈಲ್ವೆ ಕ್ರೀಡಾಭಿವೃದ್ಧಿ ಮಂಡಳಿ: 56.3 ಓವರ್‌ಗಳಲ್ಲಿ 277 (ಕರಣ್ ಶರ್ಮಾ 127, ಅಮಿತ್ ಪಾಣಿಕ್ಕರ್ 47, ಅನುರೀತ್ ಸಿಂಗ್ 53, ಎಂ.ಜಿ. ನವೀನ್ 72ಕ್ಕೆ4, ಕುಶಾಲ್ ಮಹೇಶ್ ವಾಧ್ವಾನಿ 54ಕ್ಕೆ4, ಶರಣಗೌಡ 32ಕ್ಕೆ1, ಮಿತ್ರಕಾಂತಸಿಂಗ್ ಯಾದವ್ 56ಕ್ಕೆ1)

ಫಲಿತಾಂಶ: ಕೆಎಸ್‌ಸಿಎ ಕಾರ್ಯದರ್ಶಿಗಳ ತಂಡಕ್ಕೆ ಇನಿಂಗ್ಸ್‌ ಮತ್ತು 79 ರನ್‌ಗಳ ಜಯ.

**

ಮೈಸೂರು ಕೆಎಸ್‌ಸಿಎ ಕ್ರೀಡಾಂಗಣ:

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ 103 ಓವರ್‌ಗಳಲ್ಲಿ 390;

ಕೆಎಸ್‌ಸಿಎ ಕೋಲ್ಟ್ಸ್‌: 148 ಓವರ್‌ಗಳಲ್ಲಿ 6ಕ್ಕೆ 369 (ಅಂಕಿತ್‌ ಉಡುಪ 53, ಶ್ರೀಜಿತ್‌ ಕೆ.ಎಲ್‌ 64, ಶುಭಾಂಗ್ ಹೆಗ್ಡೆ ಔಟಾಗದೆ 48, ವೈಶಾಖ್‌ ವಿಜಯಕುಮಾರ್‌ ಔಟಾಗದೆ 64; ಈಶ್ವರ್‌ ಪಾಂಡೆ 79ಕ್ಕೆ2).

**

ಎಸ್‌ಜೆಸಿಇ ಕ್ರೀಡಾಂಗಣ

ಗುಜರಾತ್ ಕ್ರಿಕೆಟ್ ಸಂಸ್ಥೆ: 85.5 ಓವರ್‌ಗಳಲ್ಲಿ 272;

ಆಂಧ್ರ ಕ್ರಿಕೆಟ್ ಸಂಸ್ಥೆ: 93.3 ಓವರ್‌ಗಳಲ್ಲಿ 313 (ತೇಜಸ್ ಪಟೇಲ್‌ 64ಕ್ಕೆ2, ಅಕ್ಷಯ್ ಪಾಂಚಾಲ್‌ 67ಕ್ಕೆ3);

ಗುಜರಾತ್ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 67 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 206 (ಧ್ರುವ ರಾವಲ್‌ 74, ಭಾರ್ಗವ್‌ ಮೆರಾಯ್‌ 97; ವಿಜಯ್‌ ಕುಮಾರ್‌ 38ಕ್ಕೆ2).

**

ಐಎಎಫ್‌ ಕ್ರೀಡಾಂಗಣ

ಕೆಎಸ್‌ಸಿಎ ಇಲೆವನ್‌, ಮೊದಲ ಇನಿಂಗ್ಸ್‌: 33 ಓವರ್‌ಗಳಲ್ಲಿ 131;

ಛತ್ತೀಸ್‌ಗಡ ಕ್ರಿಕೆಟ್ ಸಂಸ್ಥೆ,ಮೊದಲ ಇನಿಂಗ್ಸ್‌: 66.1 ಓವರ್‌ಗಳಲ್ಲಿ 201

ಕೆಎಸ್‌ಸಿಎ ಇಲೆವನ್‌, ಎರಡನೇ ಇನಿಂಗ್ಸ್‌: 69.1 ಓವರ್‌ಗಳಲ್ಲಿ 202 (ಮಿರ್‌ ಕೌನೇನ್ ಅಬ್ಬಾಸ್‌ 33, ಪವನ್ ದೇಶಪಾಂಡೆ 38; ಶಾನವಾಜ್‌ ಹುಸೇನ್‌ 48ಕ್ಕೆ3, ವಿಶಾಲ್ ಕುಶ್ವಾಶ್‌ 55ಕ್ಕೆ3, ಸೌರಭ್‌ ಕೈವಾರ್‌ 55ಕ್ಕೆ2, ಸುಮಿತ್ ರಾಯ್ಕರ್‌ 17ಕ್ಕೆ2)

ಛತ್ತೀಸ್‌ಗಢ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 41.3 ಓವರ್‌ಗಳಲ್ಲಿ 6ಕ್ಕೆ 136 (ರಿಷಭ್‌ ತಿವಾರಿ ಔಟಾಗದೆ 50; ಕೌಶಿಕ್ ವಿ 48ಕ್ಕೆ3).

ಫಲಿತಾಂಶ: ಛತ್ತೀಸ್‌ಗಢ ಕ್ರಿಕೆಟ್ ಸಂಸ್ಥೆಗೆ 4 ವಿಕೆಟ್‌ಗಳ ಜಯ.

**

ಆಲೂರು ಕ್ರೀಡಾಂಗಣ–1

ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: 106.4 ಓವರ್‌ಗಳಲ್ಲಿ 402

ಬರೋಡ ಕ್ರಿಕೆಟ್ ಸಂಸ್ಥೆ: 82.1 ಓವರ್‌ಗಳಲ್ಲಿ 305

ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌, ಎರಡನೇ ಇನಿಂಗ್ಸ್‌: 61 ಓವರ್‌ಗಳಲ್ಲಿ 2ಕ್ಕೆ 185 (ಅರ್ಜುನ್ ಹೊಯ್ಸಳ 30, ನಿಶಿತ್ ರಾಜ್‌ 40, ಲಿಯಾನ್‌ ಖಾನ್‌ ಔಟಾಗದೆ 69, ಕೆ.ವಿ.ಸಿದ್ಧಾರ್ಥ್‌ ಔಟಾಗದೆ 32).

**

ಆಲೂರು ಕ್ರೀಡಾಂಗಣ–2

ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ: 119.5 ಓವರ್‌ಗಳಲ್ಲಿ 8ಕ್ಕೆ 653 ಡಿಕ್ಲೇರ್‌

ಬಂಗಾಳ ಕ್ರಿಕೆಟ್‌ ಸಂಸ್ಥೆ, ಮೊದಲ ಇನಿಂಗ್ಸ್‌: 56.5 ಓವರ್‌ಗಳಲ್ಲಿ 188; ಎರಡನೇ ಇನಿಂಗ್ಸ್‌: 91 ಓವರ್‌ಗಳಲ್ಲಿ 6ಕ್ಕೆ 296 (ಸುದೀಪ್ ಕುಮಾರ್‌ 49, ಶುಭ್ರಜಿತ್‌ ದಾಸ್‌ 60, ಅಭಿಷೇಕ್‌ ರಾಮನ್ 76, ಸೌರಭ್ ಸಿಂಗ್‌ 60; ಇಕ್ಬಾಲ್‌ ಅಬ್ದುಲ್ಲ 77ಕ್ಕೆ2, ಸರ್ಫರಾಜ್ ಖಾನ್‌ 19ಕ್ಕೆ2).

**

ಆಲೂರು ಕ್ರೀಡಾಂಗಣ–3

ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ, ಮೊದಲ ಇನಿಂಗ್ಸ್‌: 95 ಓವರ್‌ಗಳಲ್ಲಿ 319

ವಿದರ್ಭ ಕ್ರಿಕೆಟ್‌ ಸಂಸ್ಥೆ, ಮೊದಲ ಇನಿಂಗ್ಸ್‌: 77.1 ಓವರ್‌ಗಳಲ್ಲಿ 214

ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ, ಎರಡನೇ ಇನಿಂಗ್ಸ್‌: 84.5 ಓವರ್‌ಗಳಲ್ಲಿ 331 (ಶಿವಂ ಚೌಧರಿ 102, ಉಮಂಗ್ ಶರ್ಮಾ 51, ಆಕಾಶದೀ‍ಪ್‌ ನಾಥ್ 82, ರಿಂಕು ಸಿಂಗ್ ಔಟಾಗದೆ 43; ಶುಭಂ ಕಾಪಸೆ 71ಕ್ಕೆ2, ಅಕ್ಷಯ್‌ ಕರ್ನೇವರ್‌ 99ಕ್ಕೆ2)

ವಿದರ್ಭ ಕ್ರಿಕೆಟ್‌ ಸಂಸ್ಥೆ, ಎರಡನೇ ಇನಿಂಗ್ಸ್‌: 6 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 25.

**

ಕಿಣಿ ಕ್ರೀಡಾಂಗಣ

ಕೇರಳ ಕ್ರಿಕೆಟ್ ಸಂಸ್ಥೆ: 99.5 ಓವರ್‌ಗಳಲ್ಲಿ 312

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ, ಮೊದಲ ಇನಿಂಗ್ಸ್‌: 75.4 ಓವರ್‌ಗಳಲ್ಲಿ 175

ಕೇರಳ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 92 ಓವರ್‌ಗಳಲ್ಲಿ 7ಕ್ಕೆ 214 ಡಿಕ್ಲೇರ್‌ (ರಾಹುಲ್‌ ಪಿ 73, ಸಚಿನ್ ಬೇಬಿ 37, ಅಕ್ಷಯ್‌ ಚಂದ್ರನ್‌ ಔಟಾಗದೆ 50; ಮಯಂಕ್‌ ಡಾಗರ್‌ 89ಕ್ಕೆ3, ಗುರುವಿಂದರ್ ಸಿಂಗ್‌ 81ಕ್ಕೆ4)

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ, ಎರಡನೇ ಇನಿಂಗ್ಸ್‌: 5 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 27.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.