ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಮಧ್ಯಪ್ರದೇಶ ತಂಡಕ್ಕೆ ಇನಿಂಗ್ಸ್ ಮುನ್ನಡೆ

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಬಜಾಜ್, ಕೃತಿಕ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 15:51 IST
Last Updated 28 ಸೆಪ್ಟೆಂಬರ್ 2025, 15:51 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ತಂಡದ ಮಾಧವ್ ಪಿ ಬಜಾಜ್ ಬ್ಯಾಟಿಂಗ್   –ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್‌ ಪಿ.ಎಸ್ 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ತಂಡದ ಮಾಧವ್ ಪಿ ಬಜಾಜ್ ಬ್ಯಾಟಿಂಗ್   –ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್‌ ಪಿ.ಎಸ್    

ಬೆಂಗಳೂರು: ಕೃತಿಕ್ ಕೃಷ್ಣ ಮತ್ತು ಮಾಧವ್ ಪಿ ಬಜಾಜ್ ಅವರು ಅರ್ಧಶತಕ ದಾಖಲಿಸಿದರೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಇಲೆವನ್ ತಂಡವು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸುವಲ್ಲಿ ವಿಫಲವಾಯಿತು. ಮಧ್ಯಪ್ರದೇಶ ತಂಡವು 20 ರನ್‌ಗಳ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. 

ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕದ ಬೌಲರ್‌ಗಳು ಮರುಹೋರಾಟ ತೋರಿದರು. ಅದರಿಂದಾಗಿ ದಿನದಾಟದ ಮುಕ್ತಾಯಕ್ಕೆ ಮಧ್ಯಪ್ರದೇಶ ತಂಡವು  35 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 96 ಗಳಿಸಿತು. ಒಟ್ಟು 116 ರನ್‌ಗಳ ಮುನ್ನಡೆ ಸಾಧಿಸಿತು. ಕರ್ನಾಟಕದ ಎಂ. ವೆಂಕಟೇಶ್ ಎರಡು ವಿಕೆಟ್ ಗಳಿಸಿದರು.  ಶನಿವಾರ ದಿನದಾಟದ ಮುಕ್ತಾಯಕ್ಕೆ ಕೆಎಸ್‌ಸಿಎ ತಂಡವು 4 ವಿಕೆಟ್‌ಗಳಿಗೆ 163 ರನ್ ಗಳಿಸಿತ್ತು. ಭಾನುವಾರ ಮಾಧವ್ ಪಿ ಬಜಾಜ್ (ಔಟಾಗದೇ 64) ಮತ್ತು ಕೃತಿಕ್ ಕೃಷ್ಣ (57 ರನ್) ಅವರ ಅರ್ಧಶತಕಗಳಿಂದಾಗಿ ಕೆಎಸ್‌ಸಿಎ ತಂಡಕ್ಕೆ ದೊಡ್ಡ ಅಂತರದ ಹಿನ್ನಡೆ ತಪ್ಪಿತು. 

ಪಂದ್ಯದಲ್ಲಿ ಇನ್ನೊಂದು ದಿನ ಬಾಕಿ ಇದೆ. ಕರ್ನಾಟಕ ಕಾರ್ಯದರ್ಶಿಗಳ ತಂಡವು ಪ್ರಶಸ್ತಿ ಜಯಿಸಲು ಸಣ್ಣ ಅವಕಾಶವೂ ಇದೆ. ಎದುರಾಳಿ ತಂಡವು 160–170 ರನ್‌ಗಳ ಮಿತಿಯೊಳಗೆ ಆಲೌಟ್ ಮಾಡಬೇಕು. ನಂತರ ಬ್ಯಾಟರ್‌ಗಳು ಗುರಿಯನ್ನು ಸಾಧಿಸಬೇಕು. ಆದರೆ ಮಧ್ಯಪ್ರದೇಶ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿರುವುದರಿಂದ ಪಂದ್ಯ ಜಯಿಸಲೇಬೇಕಾದ ಒತ್ತಡವಿಲ್ಲ. ಸೋಲದಂತೆ ಎಚ್ಚರ ವಹಿಸಿದರೂ ಸಾಕು.  ಕ್ರೀಸ್‌ನಲ್ಲಿರುವ ರಿಷಭ್ ಚೌಹಾಣ್ (21; 49ಎ) ಮತ್ತು ವೆಂಕಟೇಶ್ ಅಯ್ಯರ್ (ಬ್ಯಾಟಿಂಗ್ 19) ಅವರ ಮೇಲೆ ಹೆಚ್ಚಿನ ಹೊಣೆ ಇದೆ. 

ADVERTISEMENT

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮಧ್ಯಪ್ರದೇಶ: 101.2 ಓವರ್‌ಗಳಲ್ಲಿ 338. ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ 99.1 ಓವರ್‌ಗಳಲ್ಲಿ 318 (ಪಿ. ಧ್ರುವ 28, ಕೃತಿಕ್ ಕೃಷ್ಣ 57, ಮಾಧವ್ ಬಜಾಜ್ ಔಟಾಗದೇ 64, ಆರ್ಯನ್ ಪಾಂಡೆ 64ಕ್ಕೆ4, ಕುಮಾರ ಕಾರ್ತಿಕೇಯ 55ಕ್ಕೆ4) ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 35 ಓವರ್‌ಗಳಲ್ಲಿ 4ಕ್ಕೆ96 (ಯಶ್ ದುಬೆ 23, ಹಿಮಾಂಶು ಮಂತ್ರಿ 24, ರಿಷಭ್ ಚೌಹಾಣ್ 21, ಎಂ. ವೆಂಕಟೇಶ್ 17ಕ್ಕೆ2, ಅಭಿಷೇಕ್ ಅಹ್ಲಾವತ್ 22ಕ್ಕೆ1, ಮಾಧವ್ ಪಿ ಬಜಾಜ್ 39ಕ್ಕೆ1) 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ತಂಡದ ಕೃತಿಕ್ ಕೃಷ್ಣ  ಬ್ಯಾಟಿಂಗ್   –ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್‌ ಪಿ.ಎಸ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.