ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ: ಸಂಕಷ್ಟದಲ್ಲಿ ಕೆಎಸ್‌ಸಿಎ ಕೋಲ್ಸ್ಟ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
<div class="paragraphs"><p>ಹಿಮಾಚಲ ಪ್ರದೇಶ ತಂಡದ ವಿರುದ್ಧ 5 ವಿಕೆಟ್‌ ಗೊಂಚಲು ಪಡೆದ ಕೆಎಸ್‌ಸಿಎ ಕೋಲ್ಸ್ಟ್ ತಂಡದ ಶಿಖರ್ ಶೆಟ್ಟಿ ಅವರ ಬೌಲಿಂಗ್ ವೈಖರಿ </p></div>

ಹಿಮಾಚಲ ಪ್ರದೇಶ ತಂಡದ ವಿರುದ್ಧ 5 ವಿಕೆಟ್‌ ಗೊಂಚಲು ಪಡೆದ ಕೆಎಸ್‌ಸಿಎ ಕೋಲ್ಸ್ಟ್ ತಂಡದ ಶಿಖರ್ ಶೆಟ್ಟಿ ಅವರ ಬೌಲಿಂಗ್ ವೈಖರಿ

   

– ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.  

ಮೈಸೂರು: ವಿಪಿನ್‌ ಶರ್ಮಾ ಅವರ (40ಕ್ಕೆ 4) ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ಸಿಲುಕಿದ ಆತಿಥೇಯ ಕೆಎಸ್‌ಸಿಎ ಕೋಲ್ಟ್ಸ್ ತಂಡವು 2ನೇ ಇನ್ನಿಂಗ್ಸ್‌ನಲ್ಲಿ ಹಿಮಾಚಲ ಪ್ರದೇಶ ತಂಡದ ವಿರುದ್ಧ 7ಕ್ಕೆ 135 ರನ್‌ಗೆ ಕುಸಿದು ತೀವ್ರ ಸಂಕ‌ಷ್ಟಕ್ಕೆ ಸಿಲುಕಿದೆ.

ADVERTISEMENT

ಇಲ್ಲಿನ ಎಸ್‌ಜೆಸಿಇ ಮೈದಾನದಲ್ಲಿ ನಡೆಯುತ್ತಿರುವ ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಹಿಮಾಚಲ ಪ್ರದೇಶವು ಮೊದಲ ಇನ್ನಿಂಗ್ಸ್‌ನಲ್ಲಿ 91.1 ಓವರ್‌ಗಳಲ್ಲಿ 303 ರನ್‌ಗೆ ಆಲೌಟ್‌ ಆಗಿ, 163 ರನ್‌ಗಳ ಮುನ್ನಡೆ ಸಾಧಿಸಿತು. ಕೆಎಸ್‌ಸಿಎದ ಶಿಖರ್‌ ಶೆಟ್ಟಿ 55ಕ್ಕೆ 5 ವಿಕೆಟ್‌ ಪಡೆದು ಮಿಂಚಿದರು. 

ಎರಡನೇ ಇನ್ನಿಂಗ್ಸ್ ಆರಂಭಿಸಿದ ಕೆಎಸ್‌ಸಿಎ ತಂಡಕ್ಕೆ ವಿಪಿನ್‌ ಶರ್ಮಾ ಆಘಾತ ನೀಡಿದರು. ಆರಂಭಿಕರಾದ ಪ್ರಖರ್ ಚತುರ್ವೇದಿ (0) ಹಾಗೂ ವಿಶಾಲ್ ಓನತ್ ಅವರನ್ನು ಬೇಗನೆ ಔಟ್‌ ಮಾಡಿದರು. ನೆಲೆಯೂರುತ್ತಿದ್ದ ಹರ್ಷಿಲ್‌ (21) ಅವರನ್ನು ದಿವೇಶ್‌ ಶರ್ಮಾ, ಕೆ.ಪಿ.ಕಾರ್ತಿಕೇಯ (20) ಅವರನ್ನು ಅರ್ಪಿತ್‌ ಗುಲೇರಿಯಾ ಪೆವಿಲಿಯನ್‌ಗೆ ದಾರಿ ತೋರಿಸಿದರು. 

ನಾಯಕ ಅನೀಶ್ವರ್‌ ಗೌತಮ್‌ (ಔಟಾಗದೇ 36) ಅವರು ಬೌಲರ್‌ ಮೊಹಸಿನ್‌ ಖಾನ್‌ (46) ಅವರೊಂದಿಗೆ 65 ರನ್‌ಗಳನ್ನು ತಂಡಕ್ಕೆ ಸೇರಿಸಿ ಉ‍ಪಯುಕ್ತ ಕಾಣಿಕೆ ನೀಡಿದರು. ದಿನದಾಟದ ಅಂತ್ಯಕ್ಕೆ ಶಿಖರ್‌ ಶೆಟ್ಟಿ (1) ಜೊತೆ ಕ್ರೀಸ್‌ನಲ್ಲಿದ್ದು, ತಂಡವು ಸೋಲಿನ ಭೀತಿಯಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಕ್ರೀಡಾಂಗಣ: ಮೊದಲ ಇನ್ನಿಂಗ್ಸ್‌: ಕೆಎಸ್‌ಸಿಎ ಕೋಲ್ಟ್ಸ್‌: 41 ಓವರ್‌ಗಳಲ್ಲಿ 140. ಹಿಮಾಚಲ ಪ್ರದೇಶ: 91.1 ಓವರ್‌ಗಳಲ್ಲಿ 303 (ಅಂಕುಶ್‌ ಬೈನ್ಸ್ 96. ಶಿಖರ್ ಶೆಟ್ಟಿ 55ಕ್ಕೆ 5). ಎರಡನೇ ಇನ್ನಿಂಗ್ಸ್‌: 32 ಓವರ್‌ಗಳಲ್ಲಿ 7ಕ್ಕೆ 135 (ಮೊಹಸಿನ್‌ ಖಾನ್‌ 46, ಅನೀಶ್ವರ್ ಗೌತಮ್‌ ಔಟಾಗದೇ 36. ವಿಪಿನ್‌ ಶರ್ಮಾ 40ಕ್ಕೆ 4) 

ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಮೊದಲ ಇನ್ನಿಂಗ್ಸ್: ಆಂಧ್ರ ಕ್ರಿಕೆಟ್‌ ಸಂಸ್ಥೆ: 83.5 ಓವರ್‌ಗಳಲ್ಲಿ 257. ಬರೋಡ ಕ್ರಿಕೆಟ್‌ ಸಂಸ್ಥೆ:  96 ಓವರ್‌ಗಳಲ್ಲಿ 6ಕ್ಕೆ 285 (ಸುಕ್ರೀತ್ ಪಾಂಡೆ ಔಟಾಗದೇ 81, ನಿನಾದ್‌ ರತ್ವಾ 62. ಕೆಎಸ್‌ಎನ್ ರಾಜು 47ಕ್ಕೆ 3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.