ADVERTISEMENT

ಭಾರತ ಕ್ರಿಕೆಟ್ ಆಟಗಾರ್ತಿಗೆ ಕೋವಿಡ್

ಪಿಟಿಐ
Published 26 ಜುಲೈ 2022, 15:52 IST
Last Updated 26 ಜುಲೈ 2022, 15:52 IST

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದೇ ಮೊದಲ ಸಲ ನಡೆಯಲಿರುವ ಮಹಿಳಾ ಕ್ರಿಕೆಟ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ಮತ್ತೊಬ್ಬ ಆಟಗಾರ್ತಿಗೆ ಕೋವಿಡ್ ಖಚಿತವಾಗಿದೆ.

ಇದೇ ಶುಕ್ರವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಕಳೆದ ವಾರ ಒಬ್ಬ ಆಟಗಾರ್ತಿ ಮತ್ತು ಒಬ್ಬ ನೆರವು ಸಿಬ್ಬಂದಿಗೆ ಕೋವಿಡ್ ಆಗಿದ್ದ ವಿಷಯವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದರು.

‘ಭಾನುವಾರ ಪ್ರಯಾಣ ಆರಂಭಿಸುವ ಮುನ್ನ ನಡೆದ ಪರೀಕ್ಷೆಯಲ್ಲಿ ಒಬ್ಬ ಆಟಗಾರ್ತಿಗೆ ಕೋವಿಡ್ ಇರುವುದು ಖಚಿತವಾಗಿದೆ. ಹೀಗಾಗಿ ಒಟ್ಟು ಇಬ್ಬರು ಆಟಗಾರ್ತಿಯರು ಪ್ರತ್ಯೇಕವಾಸದಲ್ಲಿದ್ದು, ಬರ್ಮಿಂಗ್‌ಹ್ಯಾಮ್‌ಗೆ ತೆರಳಿಲ್ಲ. ಅವರು ಗುಣಮುಖರಾದ ನಂತರ ತೆರಡುವರು’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಐಒಎ ಎಚ್ಚರಿಕೆ

ಕಾಮನ್‌ವೆಲ್ತ್‌ ಕೂಟದಲ್ಲಿ ಸ್ಪರ್ಧಿಸಲು ತೆರಳಿರುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಸಾರ್ವಜನಿಕರ ಸಂಪರ್ಕದಿಂದ ಸಾಧ್ಯವಾದಷ್ಟು ದೂರ ಇರಬೇಕು. ಜನಜಂಗುಳಿಯಲ್ಲಿ ಹೋಗುವುದು ತಪ್ಪಿಸಬೇಕು. ಕೋವಿಡ್ ತಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಎಚ್ಚರಿಕೆ ನೀಡಿದೆ.

ಈ ಬಾರಿ ಭಾರತ ತಂಡದಲ್ಲಿ 215 ಅಥ್ಲೀಟ್‌ಗಳು ಮತ್ತು 107 ಅಧಿಕಾರಿ, ನೆರವು ಸಿಬ್ಬಂದಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.