ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿ: ಸೆಮಿಫೈನಲ್‌ಗೆ ಭಾರತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 20:16 IST
Last Updated 29 ಜನವರಿ 2022, 20:16 IST

ಕೂಲಿಜ್‌: ಎಡಗೈ ವೇಗಿ ರವಿಕುಮಾರ್ (14ಕ್ಕೆ 3) ಅವರ ಅಮೋಘ ಬೌಲಿಂಗ್ ಹಾಗೂ ಅಂಗರಿಕ್ಷ್ ರಘುವಂಶಿ (44) ಅವರ ಸೊಗಸಾದ ಬ್ಯಾಟಿಂಗ್‌ ಬಲದಿಂದಭಾರತ ತಂಡವು ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡವನ್ನು ಮಣಿಸಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ತಲುಪಿತು.

ಶನಿವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಬಾಂಗ್ಲಾದೇಶಕ್ಕೆ ಸೋಲುಣಿಸಿತು.

ಟಾಸ್ ಗೆದ್ದ ಭಾರತ ಯಶ್‌ ಧುಳ್ ನಾಯಕತ್ವದ ಭಾರತ ತಂಡವು ಬಾಂಗ್ಲಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. 38ನೇ ಓವರ್‌ನಲ್ಲಿ 111 ರನ್‌ಗಳಿಗೆ ಕಟ್ಟಿಹಾಕಿತು. ಬಾಂಗ್ಲಾ ಪರ ಮೆಹರಾಬ್‌ (30), ಐಕ್ ಮೊಲ್ಲಾ (17) ಮತ್ತು ಅಶ್ಫಿಕುರ್ ಜಮಾನ್‌ (16) ಅಲ್ಪ ಪ್ರತಿರೋಧ ತೋರಿದರು.

ADVERTISEMENT

ಭಾರತದ ಪರ ಸ್ಪಿನ್ನರ್ ವಿಕಿ ಓಸ್ವಾಲ್ (25ಕ್ಕೆ 2) ಕೂಡ ಮಿಂಚಿದರು.

ಗುರಿ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿದರೂ ಐದು ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಶೇಖ್ ರಶೀದ್‌ (26) ಮತ್ತು ಯಶ್ ಧುಳ್‌ (ಔಟಾಗದೆ 20) ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ: 37.1 ಓವರ್‌ಗಳಲ್ಲಿ 111 (ಮೆಹರಾಬ್ 30,ಐಕ್ ಮೊಲ್ಲಾ 17, ಮತ್ತು ಅಶ್ಫಿಕುರ್ ಜಮಾನ್‌ 16;ರವಿಕುಮಾರ್ 14ಕ್ಕೆ 3,ವಿಕಿ ಓಸ್ವಾಲ್ 25ಕ್ಕೆ 2; ಅಂಗಕ್ರಿಶ್ ರಘುವಂಶಿ 4ಕ್ಕೆ 1). ಭಾರತ 30.5 ಓವರ್‌ಗಳಲ್ಲಿ 5ಕ್ಕೆ 117 (ಅಂಗರಿಕ್ಷ್ ರಘುವಂಶಿ 44, ಶೇಖ್ ರಶೀದ್‌ 26, ಯಶ್ ಧುಳ್‌ ಔಟಾಗದೆ 20, ಕೌಶಲ್ ತಾಂಬೆ ಔಟಾಗದೆ 11; ರಿಪನ್ ಮಂಡಲ್‌ 31ಕ್ಕೆ 4), ಫಲಿತಾಂಶ: ಭಾರತಕ್ಕೆ ಐದು ವಿಕೆಟ್‌ಗಳ ಜಯ, ಸೆಮಿಫೈನಲ್ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.