ADVERTISEMENT

Champions Trophy: ಪಾಕ್‌ಗೆ ಭಾರತ ತೆರಳದಿರುವುದು ದುರದೃಷ್ಟಕರ;ಶೇನ್ ವ್ಯಾಟ್ಸನ್

ಪಿಟಿಐ
Published 2 ಜನವರಿ 2025, 6:23 IST
Last Updated 2 ಜನವರಿ 2025, 6:23 IST
   

ಸಿಡ್ನಿ: ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ತೆರಳದಿರುವುದು ದುರದೃಷ್ಟಕರ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಐಸಿಸಿಯ ಈ ಪಂದ್ಯಾವಳಿಯು ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ದೀರ್ಘಕಾಲದ ಫಾರ್ಮ್ ಕುಸಿತದಿಂದ ಮುಕ್ತಗೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ತೆರಳಲು ಭಾರತ ಸರ್ಕಾರ ಭದ್ರತೆಯ ಕಾರಣದಿಂದ ಅವಕಾಶ ನೀಡದ ಹಿನ್ನೆಲೆಯಲ್ಲಿ ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ದುಬೈನಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ.

ADVERTISEMENT

ಆದರೆ, ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಲ್ಲೇ ನಡೆದರೂ ಅಭಿಮಾನಿಗಳು ಕಾತರರಾಗಿತ್ತಾರೆ ಎಂದಿದ್ದಾರೆ.

ವಿಶ್ವ ಕ್ರಿಕೆಟ್‌ಗೆ ಚಾಂಪಿಯನ್ಸ್ ಟ್ರೋಫಿ ಬಹಳ ಮುಖ್ಯ. ಏಕೆಂದರೆ, ಏಕದಿನ ಕ್ರಿಕೆಟ್ ವಿಶ್ವಕಪ್‌ನ 4 ವರ್ಷಗಳ ಅಂತರವನ್ನು ಇದು ತುಂಬುತ್ತದೆ. ಟಿ–20 ಅಬ್ಬರದ ನಡುವೆ ಏಕದಿನ ಕ್ರಿಕೆಟ್ ಉಳಿವಿಗೆ ಇದು ಅತ್ಯಂತ ಸಹಾಯಕಾರಿ ಎಂದಿದ್ದಾರೆ.

‘ಏಕದಿನ ಕ್ರಿಕೆಟ್ ಅತ್ಯಂತ ಪ್ರಮುಖವಾದದ್ದು. ಆಗಾಗ್ಗೆ ಈ ಸಂಬಂಧಿತ ಪಂದ್ಯಾವಳಿ ನಡೆಯುತ್ತಿರಬೇಕು. ಚಾಂಪಿಯನ್ಸ್ ಅಂತಹದ್ದೇ ಟೂರ್ನಿ’ಎಂದು ವ್ಯಾಟ್ಸನ್ ಹೇಳಿದ್ದಾರೆ.

*****************************************

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.