ನವದೆಹಲಿ: ಇದೇ ತಿಂಗಳು ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಯುಪಿ ವಾರಿಯರ್ಸ್ ತಂಡಕ್ಕೆ ದೀಪ್ತಿ ಶರ್ಮಾ ಅವರನ್ನು ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ.
ತಂಡದ ಪೂರ್ಣಾವಧಿ ನಾಯಕಿಯಾಗಿದ್ದ ಅಲಿಸಾ ಹೀಲಿ ಅವರಿಗೆ ಕಾಲಿನ ಗಾಯದಿಂದ ಬಳಲಿದ್ದಾರೆ. ಅವರು ಚಿಕಿತ್ಸೆಗಾಗಿ ತೆರಳಿದ್ದು ಈ ಬಾರಿಯ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆದ್ದರಿಂದ ದೀಪ್ತಿಗೆ ಅವಕಾಶ ನೀಡಲಾಗಿದೆ.
ಹೋದ ವರ್ಷದ ಆವೃತ್ತಿಯಲ್ಲಿ ದೀಪ್ತಿ ಅವರು ಎಂಟು ಇನಿಂಗ್ಸ್‌ಗಳಿಂದ 295 ರನ್ ಗಳಿಸಿದ್ದರು. 136.57ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಆಡಿದ್ದರು. ಅಲ್ಲದೇ ತಮ್ಮ ಆಫ್‌ಸ್ಪಿನ್ ಕೌಶಲದ ಮೂಲಕ 10 ವಿಕೆಟ್‌ಗಳನ್ನು ಗಳಿಸಿದ್ದರು.
27 ವರ್ಷದ ದೀಪ್ತಿ ಅವರು ಈ ಹಿಂದೆ ಬಂಗಾಳ ಮತ್ತು ಪೂರ್ವ ವಲಯ ತಂಡಗಳ ನಾಯಕತ್ವ ನಿಭಾಯಿಸಿದ ಅನುಭವಿಯಾಗಿದ್ದಾರೆ. ಮಹಿಳಾ ಟಿ20 ಚಾಲೆಂಜ್ ಟೂರ್ನಿಯಲ್ಲಿ ದೀಪ್ತಿ ಅವರು ವೆಲೋಸಿಟಿ ತಂಡವನ್ನೂ ಮುನ್ನಡೆಸಿದ್ದರು.
ತಂಡದಲ್ಲಿ ಹೀಲಿ ಅವರ ಬದಲಿಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಚೈನೆಲ್ ಹೆನ್ರಿ ಅವರಿಗೆ ಸ್ಥಾನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.