ADVERTISEMENT

ಚೆಂಡು ಸೋಂಕುರಹಿತಗೊಳಿಸಲು ಪ್ರಯತ್ನ: ಸಿಎ

ರಾಯಿಟರ್ಸ್
Published 20 ಮೇ 2020, 19:45 IST
Last Updated 20 ಮೇ 2020, 19:45 IST

ಮೆಲ್ಬರ್ನ್ : ಕ್ರಿಕೆಟ್ ಆಟಗಾರರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಚೆಂಡನ್ನು ಸೋಂಕುರಹಿತವಾಗಿರುವಂತೆ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪ್ರಯತ್ನಿಸುತ್ತಿದೆ.

ಅನಿಲ್ ಕುಂಬ್ಳೆ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಾಂತ್ರಿಕ ಸಮಿತಿಯು ಚೆಂಡಿಗೆ ಎಂಜಲು ಹಚ್ಚುವುದನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿದೆ. ಇದರಿಂದಾಗಿ ಎಂಜಲು ಬಳಕೆಯ ಬದಲಿಗೆ ಚೆಂಡಿನ ಹೊಳಪು ಕಾಪಾಡಲು ಯಾವ ವಸ್ತು ಸೂಕ್ತ ಎಂದು ಶೋಧಿಸಲಾಗುತ್ತಿದೆ.

‘ಚೆಂಡು ಚರ್ಮದಿಂದ ತಯಾರಿಸಲ್ಪಟಿರುತ್ತದೆ. ಆದ್ದರಿಂದ ಸೋಂಕುರಹಿತಗೊಳಿಸುವುದು ಸುಲಭವಲ್ಲ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಿಲ್ಲ. ಪರ್ಯಾಯ ಪದಾರ್ಥಕ್ಕಾಗಿ ಹುಡುಕುತ್ತಿದ್ದೇವೆ’ ಎಂದು ಸಿಎ ಕ್ರೀಡಾ ವೈದ್ಯಕೀಯ ವಿಭಾಗದ ವ್ಯವಸ್ಥಾಪಕ ಅಲೆಕ್ಸ್‌ ಕೌಂಟುರಿಸ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.